ರಜೆಯಿಲ್ಲದೆ ಹೆಂಡತಿ ಕೋಪಗೊಂಡಿದ್ದಾಳೆ.. ದಯವಿಟ್ಟು ರಜೆ ಕೊಡಿ; ಮೇಲಾಧಿಕಾರಿಗೆ ಪತ್ರ ಬರೆದ ಕಾನ್ಸ್‌ ಸ್ಟೇಬಲ್‌

ಲಕ್ನೋ: ಪೊಲೀಸ್‌ ಕೆಲಸದಲ್ಲಿ ನಿರ್ದಿಷ್ಟವಾದ ರಜೆಗಳಿರುತ್ತವೆ. ಹೆಚ್ಚು ರಜೆಗಳು ಸಿಗುವುದು ಕಷ್ಟ. ಇಲ್ಲೊಬ್ಬ ಕಾನ್ಸ್‌ ಸ್ಟೇಬಲ್‌ ರಜೆ ಬೇಕೆಂದು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಳೆದ ತಿಂಗಳಷ್ಟೇ ಕಾನ್ಸ್‌ ಸ್ಟೇಬಲ್‌ ಗೆ ಮದುವೆಯಾಗಿದೆ. ಮದುವೆಯಾದ ಬಳಿಕ ಸರಿಯಾದ ರಜೆಯಿಲ್ಲದೆ ಯುಪಿಯ ಮಹಾರಾಜ್‌ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ.

ಹೆಂಡತಿಯ ಬಳಿ ಸಂಬಂಧಿಕರ ಹುಟ್ಟು ಹಬ್ಬಕ್ಕೆ ಬರುತ್ತೇನೆ ಎಂದು ಭರವಸೆ ಕೊಟ್ಟು ಕೆಲಸಕ್ಕೆ ಬಂದಿರುವ ಕಾನ್ಸ್‌ ಸ್ಟೇಬಲ್‌ ಗೆ ರಜೆ ಸಿಗದ ಕಾರಣ, ಈ ವಿಷಯವನ್ನು ಹೆಂಡತಿಯ ಬಳಿ ಹೇಳಿದ್ದಾನೆ. ಇದೇ ಕಾರಣಕ್ಕೆ ಹೆಂಡತಿ ಗಂಡನ ಬಳಿ ಸಿಟ್ಟಾಗಿ ಮಾತು ಬಿಟ್ಟಿದ್ದಾಳೆ.

ರಜೆಗಾಗಿ ಏನು ಮಾಡುವುದೆಂದು ಯೋಚನೆ ಮಾಡಿ ಕೊನೆಗೆ ಮೇಲಾಧಿಕಾರಿಗೆ ಪತ್ರ ಬರೆದು, ನನಗೆ ರಜೆ ಬೇಕು, ಪತ್ನಿ ಸಿಟ್ಟಾಗಿದ್ದಾಳೆ. ಅವಳ ಬಳಿ ರಜೆ ತೆಗೆದುಕೊಂಡು ಬರುತ್ತೇನೆ ಎಂದಿದ್ದೆ. ರಜೆ ಸಿಗದ ಕಾರಣ ಅವಳು ನನ್ನ ಫೋನಿಗೂ ಪ್ರತಿಕ್ರಿಯಿಸುತ್ತಿಲ್ಲ. ನನ್ನ ಬಳಿ ಮಾತು ಬಿಟ್ಟಿದ್ದಾಳೆ. ನನಗೆ ರಜೆ ಕೊಡಿ ಎಂದು ಪತ್ರ ಬರೆದಿದ್ದಾರೆ.

ಮೇಲಾಧಿಕಾರಿ ಈದನ್ನು ನೋಡಿ ಜ.10 ರಿಂದ ಕಾನ್ಸ್‌ ಸ್ಟೇಬಲ್‌ ಗೆ 5 ದಿನ ರಜೆಯನ್ನು ಕೊಟ್ಟಿದ್ದಾರೆ.

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಕಾನ್ಸ್‌ ಸ್ಟೇಬಲ್‌ ರಜೆ ಪತ್ರ ವೈರಲ್‌ ಆಗಿದೆ.

Latest Indian news

Popular Stories