ಸುಶ್ಮಿತಾ ಸೇನ್ ಗೆ ಹೃದಯಾಘಾತ; ಆಂಜಿಯೋಪ್ಲಾಸ್ಟ್‌ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಾಜಿ ಭುವನ ಸುಂದರಿ

ಮುಂಬೈ: ಬಾಲಿವುಡ್ ನಟಿ ಹಾಗೂ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಅವರು ಎರಡು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದು, ಆಂಜಿಯೋಪ್ಲಾಸ್ಟ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವುದಾಗಿ ಗುರುವಾರ ಹೇಳಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿರುವ ಸುಶ್ಮಿತಾ ಸೇನ್ ಅವರು, ಕೆಲವು ದಿನಗಳ ಹಿಂದೆ ನನಗೆ ಹೃದಯಘಾತವಾಗಿತ್ತು. ಆಗ ನನಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ಮಾಡಿ ಸ್ಟಂಟ್ ಹಾಕಿದ್ದಾರೆ. ಮುಖ್ಯವಾದ ವಿಚಾರ ಏನೆಂದರೆ ನನ್ನ ಹೃದ್ರೋಗ ತಜ್ಞರು ನನ್ನ ಹೃದಯ ವಿಶಾಲವಾದದ್ದು ಹಾಗೂ ತುಂಬಾ ಪ್ರೀತಿ ತುಂಬಿದೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

“ನಿಮ್ಮ ಹೃದಯವನ್ನು ಸದಾ ಸಂತೋಷದಿಂದ ಮತ್ತು ಧೈರ್ಯದಿಂದ ಇಟ್ಟುಕೊಳ್ಳಿ. ನಿಮಗೆ ಅಗತ್ಯವಿರುವಾಗ ಅದು ನಿಮ್ಮೊಂದಿಗೆ ನಿಲ್ಲುತ್ತದೆ’… ಇದು ತಂದೆ ಸುಬಿರ್‌ ಸೇನ್ ಅವರ ಬುದ್ಧಿವಂತ ಮಾತುಗಳು ಎಂದು ಬರೆದುಕೊಂಡಿದ್ದಾರೆ.

ನನ್ನ ಪರ ನಿಂತು ನನ್ನ ಆರೋಗ್ಯ ವಿಚಾರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸರಿಯಾದ ಸಮಯದಕ್ಕೆ ಚಿಕಿತ್ಸೆ ಪಡೆದುಕೊಂಡಿರುವೆ. ಈ ಪೋಸ್ಟ್‌ ಮೂಲಕ ನನ್ನ ಅಭಿಮಾನಿಗಳು ಮತ್ತು ಆಪ್ತರಿಗೆ ವಿಚಾರ ತಿಳಿಸುತ್ತಿರುವೆ. ಆರೋಗ್ಯವಾಗಿರುವ ಕಾರಣ ಗುಡ್ ನ್ಯೂಸ್‌. ಈಗ ನಾನು ಸಂಪೂರ್ಣವಾಗಿ ರೆಡಿಯಾಗಿದ್ದು ಮತ್ತೊಮ್ಮೆ ಜೀವನ ಶುರು ಮಾಡಲು ಸಿದ್ಧ’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಸುಶ್ಮಿತಾ ಸೇನ್ ಬರೆದುಕೊಂಡಿದ್ದಾರೆ.

“ನಾನು ಒಂದೆರಡು ದಿನಗಳ ಹಿಂದೆ ಹೃದಯಾಘಾತದಿಂದ ಬಳಲುತ್ತಿದ್ದೆ. ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿದೆ. ಸ್ಥಳದಲ್ಲಿ ಸ್ಟೆಂಟ್ ಮತ್ತು ಮುಖ್ಯವಾಗಿ, ನನ್ನ ಹೃದ್ರೋಗ ತಜ್ಞರು ‘ನನಗೆ ದೊಡ್ಡ ಹೃದಯವಿದೆ’ ಎಂದು ಮರುದೃಢೀಕರಿಸಿದರು,” 47 ವರ್ಷದ ಸೇನ್ ಬರೆದಿದ್ದಾರೆ.

Latest Indian news

Popular Stories