ಹಸುವಿನ ಸಗಣಿ ಮನೆಗಳು ಪರಮಾಣು ವಿಕಿರಣಗಳಿಗೆ ಹಾನಿಯಾಗದಂತೆ ತಡೆಯುತ್ತದೆ – ಗುಜರಾತ್ ಕೋರ್ಟ್

ಹಸುವಿನ ಸಗಣಿಯಿಂದ ಮಾಡಲ್ಪಟ್ಟ ಮನೆಗಳಿಗೆ ಪರಮಾಣು ವಿಕಿರಣವು ಹಾನಿ ಮಾಡಲಾರದು ಮತ್ತು ಗೋಹತ್ಯೆಯನ್ನು ರದ್ದುಗೊಳಿಸಿದ ದಿನದಂದು ಭೂಮಿಯ ಎಲ್ಲಾ ಸಮಸ್ಯೆಗಳನ್ನು ಪರಿಹಾರವಾಗುವುದು ಎಂದು ಗುಜರಾತ್‌ನ ನ್ಯಾಯಾಲಯವು ಹೇಳಿಕೊಂಡಿದೆ.

ಮಹಾರಾಷ್ಟ್ರದಿಂದ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಿದ್ದಕ್ಕಾಗಿ ಮೊಹಮ್ಮದ್ ಅಮೀನ್ ಎಂಬಾತನಿಗೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಪ್ರಕರಣ ಇದೀಗ ಇಂಗ್ಲಿಷ್‌ಗೆ ಅನುವಾದಗೊಂಡಿದೆ.

ಸೆಷನ್ಸ್ ನ್ಯಾಯಾಧೀಶ ಎಸ್.ವಿ. ವ್ಯಾಸ ತಾಪಿಯ ಜಿಲ್ಲಾ ನ್ಯಾಯಾಲಯದಲ್ಲಿ ಆದೇಶದಲ್ಲಿ, “ಗೋವು ಕೇವಲ ಪ್ರಾಣಿ ಮಾತ್ರವಲ್ಲ ತಾಯಿಯೂ ಹೌದು. ಅದಕ್ಕಾಗಿಯೇ ಅವಳನ್ನು ‘ಗೌಮಾತೆ’ ಎಂದು ಕರೆಯುತ್ತಾರೆ … ಇಡೀ ವಿಶ್ವಕ್ಕೆ ಗೋವುಗಳ ಪ್ರಯೋಜನಗಳನ್ನು ವಿವರಿಸಲು ಸಾಧ್ಯವಿಲ್ಲ. ಗೋವಿನ ಒಂದು ರಕ್ತದ ಹನಿಯೂ ಭೂಮಿಯ ಮೇಲೆ ಬೀಳದ ದಿನ ಭೂಮಿಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಮತ್ತು ಭೂಮಿಯ ಯೋಗಕ್ಷೇಮವು ನೆಲೆಗೊಳ್ಳುತ್ತದೆ. ಗೋಹತ್ಯೆ ಸಮಾಜಕ್ಕೆ ಅವಮಾನ’ ಎಂದೂ ನ್ಯಾಯಾಧೀಶರು ಹೇಳಿದ್ದಾರೆ.

ಮೂಲ: ThePrint

Latest Indian news

Popular Stories