ಹಾದಿ ತಪ್ಪಿ ಗ್ರಾಮಗಳಿಗೆ ನುಗ್ಗಿದ್ದ ನಮೀಬಿಯನ್ ಚೀತಾ ಮತ್ತೆ ಕುನೋ ಅಭಯಾರಣ್ಯಕ್ಕೆ ಶಿಫ್ಟ್; ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು!

ಶಿಯೋಪುರ್: ಇತ್ತೀಚೆಗೆ ಅಭಯಾರಣ್ಯದಿಂದ ಹಾದಿ ತಪ್ಪಿ ಗ್ರಾಮಗಳಿಗೆ ನುಗ್ಗಿದ್ದ ನಮೀಬಿಯನ್ ಚೀತಾ ಓಬನ್ ನನ್ನು ಮತ್ತೆ ಅಭಯಾರಣ್ಯಕ್ಕೆ ಕರೆತರುವಲ್ಲಿ ಕೊನೆಗೂ ಮಧ್ಯ ಪ್ರದೇಶ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಈ ಹಿಂದೆ ಭಾರತಕ್ಕೆ ಬಂದಿದ್ದ ನಮೀಬಿಯಾದ ಗಂಡು ಚಿರತೆಗಳಲ್ಲಿ ಒಂದಾದ ‘ಒಬಾನ್’ ಕುನೋ ರಾಷ್ಟ್ರೀಯ ಉದ್ಯಾನವನದ ಗಡಿಯಿಂದ ತಪ್ಪಿಸಿಕೊಂಡು ಹೋಗಿ ಸ್ಥಳೀಯ ಗ್ರಾಮಗಳಿಗೆ ನುಗ್ಗಿತ್ತು. ಐದು ದಿನಗಳ ಹಿಂದೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಸಮೀಪದ ಹಳ್ಳಿಯೊಂದರಲ್ಲಿ ಈ ಚೀತಾ ಕಾಣಿಸಿಕೊಂಡಿತ್ತು. ಇದೀಗ ಅಧಿಕಾರಿಗಳ ಹರಸಾಹಸದ ಬಳಿಕ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಹಾದಿ ತಪ್ಪಿದ ಚೀತಾವನ್ನು ಮರಳಿ ತರಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ನಮೀಬಿಯಾದ ಚೀತಾವನ್ನು ಗುರುವಾರ ಸಂಜೆ ಶಿವಪುರಿ ಜಿಲ್ಲೆಯ ಅರಣ್ಯದಿಂದ ರಕ್ಷಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಕುನೋ ವನ್ಯಜೀವಿ ವಿಭಾಗದ ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ಅವರು, ‘ಶಿವಪುರಿ ಜಿಲ್ಲೆಯ ಗಡಿಯಲ್ಲಿರುವ ಬೈರಾದ್ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಿಂದ ಸಂಜೆ 4-5 ರ ಸುಮಾರಿಗೆ ಓಬನ್ ಸಿಕ್ಕಿಬಿದ್ದಿದ್ದು, ಕುನೋ ರಾಷ್ಟ್ರೀಯ ಉದ್ಯಾನವನದ ಪಾಲ್ಪುರ ಅರಣ್ಯಕ್ಕೆ ಬಿಡಲಾಗಿದೆ” ಎಂದು  ತಿಳಿಸಿದ್ದಾರೆ.

Latest Indian news

Popular Stories