ಗುಜರಾತ್ ನ ನರ್ಮದಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 7 ಮಂದಿ ದುರಂತ ಸಾವು!

ಗುಜರಾತ್: ನರ್ಮದಾ ನದಿಯಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಪೊಯಿಚಾದಲ್ಲಿ ನಡೆದಿದೆ.

ನರ್ಮದಾ ನದಿಯಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಪೊಯಿಚಾದಲ್ಲಿ ನಡೆದಿದೆ.

ಎನ್ಡಿಆರ್‌ಎಫ್ ಮತ್ತು ವಡೋದರಾ ಅಗ್ನಿಶಾಮಕ ತಂಡವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಈಜಲು ನದಿಗೆ ಇಳಿದ ಎಂಟು ಜನರಲ್ಲಿ ಒಬ್ಬನನ್ನು ಸ್ಥಳೀಯರು ರಕ್ಷಿಸಿದರು ಮತ್ತು ನಂತರ ನರ್ಮದಾ ಜಿಲ್ಲಾ ಪೊಲೀಸರ ಕೋರಿಕೆಯ ಮೇರೆಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್‌ಎಫ್) ಶೋಧ ಕಾರ್ಯಾಚರಣೆಗೆ ಸೇರಿಕೊಂಡಿತು. ಮೃತರು ಸೂರತ್ ನಿಂದ ವಡೋದರಾ ಮತ್ತು ನರ್ಮದಾ ಜಿಲ್ಲೆಗಳ ಗಡಿಯಲ್ಲಿರುವ ಪೊಯಿಚಾಗೆ ಆಗಮಿಸಿದ 17 ಸದಸ್ಯರ ಗುಂಪಿನ ಭಾಗವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories