ನಡುರಸ್ತೆಯಲ್ಲಿ ಕಬ್ಬಿಣದ ಸಲಾಕೆಯಿಂದ 15 ಬಾರಿ ಹೊಡೆದು ಬಾಲಕಿಯ ಹತ್ಯೆ!

ಮುಂಬೈನ ರಸ್ತೆಯಲ್ಲಿ ಬರ್ಬರ ಹತ್ಯೆ ನಡೆದಿದೆ, ಹಾಡಹಗಲೇ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬ ಕಬ್ಬಿಣದ ಸಲಾಕೆಯಿಂದ ಪ್ರೇಯಸಿಗೆ 15 ಬಾರಿ ಹೊಡೆದು ಹತ್ಯೆ ಮಾಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುಂಬೈನ ವಸಾಯಿಯಲ್ಲಿ ಘಟನೆ ನಡೆದಿದೆ. ಯುವತಿಯ ಎದೆ, ತಲೆಯ ಮೇಲೆ ಮನಬಂದಂತೆ ಕಬ್ಬಿಣದ ಸಲಾಕೆಯಿಂದ ಥಳಿಸಿದ್ದಾನೆ.

ರಸ್ತೆ ಮಧ್ಯದಲ್ಲಿ ಆಕೆಯ ಶವ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು, ವರದಿಯ ಪ್ರಕಾರ ಆತ ಆಕೆಯ ಗೆಳೆಯನಾಗಿದ್ದು, ಆಕೆಯನ್ನು ರಸ್ತೆಗೆ ತಳ್ಳಿ ಮನಬಂದಂತೆ ಥಳಿಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆತ ಯಾಕೆ ಹೀಗೆ ಮಾಡಿದೆ ಎಂದು ಕೂಗುತ್ತಾ ಆಕೆಗೆ ಥಳಿಸುತ್ತಿದ್ದ, ನಂತರ ಆಕೆ ಪ್ರಜ್ಞೆ ಇಲ್ಲದೆ ಅಲ್ಲೇ ಬಿದ್ದಿದ್ದಳು, ಇಬ್ಬರ ಗುರುತು ಇನ್ನೂ ಸಿಕ್ಕಿ ಪತ್ತೆಯಾಗಿಲ್ಲ. ಈ ಘಟನೆಯನ್ನು ರಸ್ತೆಯಲ್ಲಿ ಹೋಗುವವವರು ವಿಡಿಯೋ ಮಾಡಿದ್ದಾರೆ.

ಯಾರೂ ಕೂಡ ಭಯದಿಂದ ಆಕೆಯ ರಕ್ಷಣೆಗೆ ಬರಲಿಲ್ಲ, ರಕ್ತದ ಮಡುವಿನಲ್ಲಿ ಆಕೆ ನಿತ್ರಾಣಳಾಗಿ ಬಿದ್ದಿದ್ದು, ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಕೂಡ ಸ್ಥಳಕ್ಕೆ ಬಂದಿರಲಿಲ್ಲ.

Latest Indian news

Popular Stories