18ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಬಿ ಮಹತಾಬ್‌ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಬಿಜೆಪಿ ಸದಸ್ಯ ಬಿ ಮಹತಾಬ್‌ಗೆ ನೂತನವಾಗಿ ರಚನೆಯಾದ 18ನೇ ಲೋಕಸಭೆಯ ‘ಹಂಗಾಮಿ ಸ್ಪೀಕರ್’ ಆಗಿ ಸೋಮವಾರ ಪ್ರಮಾಣ ವಚನ ಬೋಧಿಸಿದರು.

ಏಳು ಬಾರಿ ಸಂಸದರಾಗಿರುವ ಮಹತಾಬ್ ಅವರು ಅಧ್ಯಕ್ಷರ ಸಮಿತಿಯೊಂದಿಗೆ ಇಂದು ಮತ್ತು ನಾಳೆ ಲೋಕಸಭೆಯ ಕಲಾಪಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ಈ ಬಾರಿ ಗೆದ್ದ ಅಭ್ಯರ್ಥಿಗಳು 18 ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.

ನಾಡಿದ್ದು ಬುಧವಾರ, ಅವರು ಹೊಸ ಸ್ಪೀಕರ್ ಆಯ್ಕೆಯಾಗುವವರೆಗೆ ಸದನದ ಅಧ್ಯಕ್ಷತೆ ವಹಿಸಲಿದ್ದಾರೆ. ಅಧ್ಯಕ್ಷರ ಸಮಿತಿಯೊಂದಿಗೆ ಮಹತಾಬ್ ಅವರನ್ನು ಜೂನ್ 20 ರಂದು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿತ್ತು.

Latest Indian news

Popular Stories