23 ವರ್ಷಗಳ ಬಳಿಕ ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಶನ್ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

ನವದೆಹಲಿ : ಇಲ್ಲಿಯವರೆಗೆ, ರೇಟಿಂಗ್ ಏಜೆನ್ಸಿಗಳು, ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಇದಕ್ಕೆ ಮುದ್ರೆ ಒತ್ತಿದ್ದವು, ಆದರೆ ಈಗ ಇಡೀ ಜಗತ್ತು ಭಾರತದ ಶಕ್ತಿಯನ್ನು ಒಪ್ಪಿಕೊಂಡಿದೆ. ವಿಶ್ವದ 193 ದೇಶಗಳ ಸಂಘಟನೆಯಾದ ವಿಶ್ವಸಂಸ್ಥೆ ಕೂಡ ಭಾರತದ ವೇಗವು ನಮ್ಮ ಆಲೋಚನೆಗಿಂತ ಹೆಚ್ಚಾಗಿದೆ ಎಂದು ಹೇಳಿದೆ.

ಬರೋಬ್ಬರಿ 23 ವರ್ಷಗಳ ಬಳಿಕ ಮತ್ತೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆಯಾಗಿದ್ದು, ಸಿಬಲ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರಾಯ್ ಅವರನ್ನು ಸೋಲಿಸುವ ಮೂಲಕ ವಿಜಯಿಯಾದರು.
ಪ್ರದೀಪ್ ರಾಯ್ 689 ಮತ ಗಳಿಸಿದರೆ, ಕಪಿಲ್ ಸಿಬಲ್ ಅವರು 1066 ಮತ ಗಳಿಸಿದರು. ಹಾಲಿ ಅಧ್ಯಕ್ಷ, ಹಿರಿಯ ವಕೀಲ ಡಾ. ಆದೀಶ್ ಸಿ ಅಗರವಾಲಾ ಅವರು 296 ಮತಗಳನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನುಳಿದಂತೆ, ಪ್ರಿಯಾ ಹಿಂಗೋರಾಣಿ, ತ್ರಿಪುರಾರಿ ರೇ ಮತ್ತು ನೀರಜ್ ಶ್ರೀವಾಸ್ತವ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಈಗ ನಾಲ್ಕನೇ ಬಾರಿಗೆ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು ಈ ಹಿಂದೆ ಮೂರು ಬಾರಿ, 1995-96, 1997-98 ಮತ್ತು 2001ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2001ರ ಬಳಿಕ ಅಂದರೆ 23 ವರ್ಷಗಳ ಬಳಿಕ ಮತ್ತೆ ಕಪಿಲ್ ಸಿಬಲ್‌ಗೆ ಅಧ್ಯಕ್ಷ ಸ್ಥಾನ ಒಲಿದಿದೆ.

ಸುಮಾರು ಎರಡು ದಶಕಗಳ ನಂತರ ಸಿಬಲ್ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಯನ್ನು 377 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅವರ ವಿಜಯದ ನಂತರ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಭಿನಂದಿಸಿದ್ದು, ಪ್ರಜಾಪ್ರಭುತ್ವಕ್ಕಾಗಿ ಹೋರಾಟವನ್ನು ಮುಂದುವರೆಸುವಂತೆ ವಿನಂತಿಸಿದ್ದಾರೆ.

Latest Indian news

Popular Stories