ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ;ಸಾವಿನ ಸಂಖ್ಯೆ 34ಕ್ಕೆ ಏರಿಕೆ.

ಭೀಕರ ಪ್ರವಾಹದಿಂದಾಗಿ ಅಸ್ಸಾಂನಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಧೇಮಾಜಿ ಜಿಲ್ಲೆಯಲ್ಲಿ ಭಾನುವಾರ ಇಬ್ಬರು ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 34 ಕ್ಕೆ ಏರಿದೆ.

ಈಶಾನ್ಯ ರಾಜ್ಯದಲ್ಲಿ ಬ್ರಹ್ಮಪುತ್ರ ನದಿ ಮತ್ತು ಅದರ ಉಪನದಿಗಳ ನೀರಿನ ಮಟ್ಟವು ಕಳೆದ ತಿಂಗಳು ಏರಿಕೆಯಾಗಿದ್ದು, ಜನವಸತಿಗಳ ಮೇಲೆ ಪರಿಣಾಮ ಬೀರಿದೆ ಮತ್ತು ನಿವಾಸಿಗಳಿಗೆ ತೊಂದರೆಗಳನ್ನು ಉಂಟುಮಾಡಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‌ಎಂಡಿಎ) ಪ್ರಕಾರ, “ಧೇಮಾಜಿ ಜಿಲ್ಲೆಯ ಗೋಗಮುಖ್ ಮತ್ತು ಜೊನೈ ಪ್ರದೇಶದಲ್ಲಿ ಭಾನುವಾರ ಇಬ್ಬರು ಮಕ್ಕಳು ಪ್ರವಾಹದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ” ಸಾವಿನ ಸಂಖ್ಯೆ 34 ಕ್ಕೆ ಏರಿದೆ.ರಾಜ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಈ 7 ಜಿಲ್ಲೆಗಳ 411 ಗ್ರಾಮಗಳ ವಿಶಾಲ ಪ್ರದೇಶಗಳು ಪ್ರವಾಹದಲ್ಲಿ ಮುಳುಗಿವೆ. ಪ್ರವಾಹದಿಂದ 2.62 ಲಕ್ಷ ಜನರು ಬಾಧಿತರಾಗಿದ್ದಾರೆ.

Latest Indian news

Popular Stories