ಹರಿಯಾಣದಲ್ಲಿ ಬಸ್ ಪಲ್ಟಿ, 40 ಶಾಲಾ ಮಕ್ಕಳಿಗೆ ಗಾಯ

ಹರಿಯಾಣ: ವೇಗವಾಗಿ ಚಲಿಸುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಕನಿಷ್ಠ 40 ಶಾಲಾ ಮಕ್ಕಳು ಗಾಯಗೊಂಡಿರುವ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಪಂಚಕುಲದ ನೌಲ್ಟಾ ಗ್ರಾಮದ ಬಳಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ.

ಗಾಯಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ ಪಿಂಜೋರ್ ಆಸ್ಪತ್ರೆ ಮತ್ತು ಪಂಚಕುಲದ ಸೆಕ್ಟರ್ 6 ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಆರಂಭಿಕ ವರದಿಗಳ ಪ್ರಕಾರ, ಅತಿಯಾದ ವೇಗ, ಹೆಚ್ಚುವರಿ ಪ್ರಯಾಣಿಕರು ಮತ್ತು ರಸ್ತೆಯ ಕಳಪೆ ಸ್ಥಿತಿಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ

Latest Indian news

Popular Stories