ನವದೆಹಲಿ : ದೆಹಲಿ ಸರ್ಕಾರ ಸೋಮವಾರ ತೃತೀಯ ಲಿಂಗಿ ಸಮುದಾಯ ಎದುರಿಸುತ್ತಿರುವ ಸಾಮಾಜಿಕ ನಿರ್ಲಕ್ಷ್ಯವನ್ನ ಪರಿಹರಿಸುವ ಬದ್ಧತೆಯನ್ನ ವ್ಯಕ್ತಪಡಿಸಿದೆ. ಎಲ್ಲರಿಗೂ ಸಮಾನ ಹಕ್ಕುಗಳನ್ನ ಒತ್ತಿಹೇಳಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ಬಸ್ಗಳಲ್ಲಿ ತೃತೀಯ ಲಿಂಗಿ ಸಮುದಾಯಕ್ಕೆ ಉಚಿತ ಪ್ರಯಾಣವನ್ನು ಸರ್ಕಾರ ಪರಿಚಯಿಸುತ್ತಿದೆ ಎಂದು ಘೋಷಿಸಿದರು.
ಈ ಪ್ರಸ್ತಾಪವನ್ನ ಶೀಘ್ರದಲ್ಲೇ ಕ್ಯಾಬಿನೆಟ್ ಅಂಗೀಕರಿಸುವ ನಿರೀಕ್ಷೆಯಿದೆ, ಈ ನಿರ್ಧಾರವು ತೃತೀಯ ಲಿಂಗಿಗಳಿಗೆ ಗಮನಾರ್ಹವಾಗಿ ಪ್ರಯೋಜನವನ್ನ ನೀಡುತ್ತದೆ ಎಂಬ ಭರವಸೆಯೊಂದಿಗೆ ಸಿಎಂ ಮಾಹಿತಿ ನೀಡಿದರು.
“ನಮ್ಮ ಸಾಮಾಜಿಕ ಪರಿಸರದಲ್ಲಿ ತೃತೀಯ ಲಿಂಗಿ ಸಮುದಾಯವನ್ನ ಹೆಚ್ಚಾಗಿ ನಿರ್ಲಕ್ಷಿಸಲಾಗಿದೆ. ಇದು ಸಂಭವಿಸಬಾರದು, ಅವ್ರು ಸಹ ಮನುಷ್ಯರು ಮತ್ತು ಅವರಿಗೆ ಸಮಾನ ಹಕ್ಕುಗಳಿವೆ. ದೆಹಲಿ ಸರ್ಕಾರವು ಈಗ ದೆಹಲಿ ಬಸ್ಸುಗಳಲ್ಲಿ ಟ್ರಾನ್ಸ್ಜೆಂಡರ್ ಸಮುದಾಯಕ್ಕೂ ಉಚಿತ ಪ್ರಯಾಣವನ್ನ ನೀಡಲು ನಿರ್ಧರಿಸಿದೆ. ಶೀಘ್ರದಲ್ಲೇ ಇದನ್ನು ಕ್ಯಾಬಿನೆಟ್ ಅಂಗೀಕರಿಸಿ ಜಾರಿಗೆ ತರಲಿದೆ. ಈ ನಿರ್ಧಾರವು ತೃತೀಯ ಲಿಂಗಿ ಸಮುದಾಯದ ಜನರಿಗೆ ಹೆಚ್ಚಿನ ಪ್ರಯೋಜನವನ್ನ ನೀಡುತ್ತದೆ ಎಂದು ನನಗೆ ಸಂಪೂರ್ಣ ಭರವಸೆ ಇದೆ” ಎಂದು ಕೇಜ್ರಿವಾಲ್ ಹೇಳಿದರು.