ದೆಹಲಿ | ಬೆಂಕಿ ಅವಘಡ: 5 ಅಂಗಡಿಗಳಿಗೆ ಹಾನಿ, 17 ಕಾರುಗಳು ಭಸ್ಮ

ನವದೆಹಲಿ: ಉತ್ತರ ದೆಹಲಿಯ ಚಾಂದಿನಿ ಚೌಕ್ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡು ಐದು ಅಂಗಡಿಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಸಾವು, ನೋವಿನ ಬಗ್ಗೆ ವರದಿಯಾಗಿಲ್ಲ.ರಾಜ್‌ಕೋಟ್‌ ಅಗ್ನಿ ದುರಂತ: ಗೇಮ್‌ ಝೋನ್‌ ಸಹಪಾಲುದಾರನೂ ಸಾವು

ಫತೇಪುರಿ ಮಸೀದಿ ಸಮೀಪ ಇದ್ದ ಐದು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ಬಗ್ಗೆ ಮುಂಜಾನೆ 3.12ರ ವೇಳೆಗೆ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಬೆಳಿಗ್ಗೆ 5 ಗಂಟೆ ಹೊತ್ತಿಗೆ ಬೆಂಕಿಯನ್ನು ನಂದಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನೊಂದು ಘಟನೆಯಲ್ಲಿ ದೆಹಲಿಯ ಮಧು ವಿಹಾರದ ಪ್ರದೇಶದ ನಾಗರಿಕ ಪ್ರಾಧಿಕಾರದ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಅವಘಡ ಸಂಭವಿಸಿ 17 ಕಾರುಗಳು ಸುಟ್ಟು ಹೋಗಿವೆ.

Latest Indian news

Popular Stories