ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಶ್ವೇತ ಪತ್ರ ಮಂಡಿಸಿದ್ದಾರೆ.ಸಂಸತ್ತಿನ ಕಲಾಪದಲ್ಲಿಯೇ ಶ್ವೇತಪತ್ರ ಮಂಡಿಸೋದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಅದಕ್ಕಾಗಿ ಒಂದು ದಿನ ಸಂಸತ್ ಕಲಾಪವನ್ನು ಮುಂದೂಡಿಕೆ ಮಾಡಲಾಗಿತ್ತು.ಅಂತೆಯೇ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶ್ವೇತಪತ್ರ ಮಂಡಿಸಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡನೆ ವೇಳೆ ಈ ದುರುಪಯೋಗದ ಬಗ್ಗೆ ಶ್ವೇತಪತ್ರ ಹೊರಡಿಸುವ ಬಗ್ಗೆ ಮಾಹಿತಿ ನೀಡಿದ್ದರು. ಸೀತಾರಾಮನ್ ಅವರು, ‘ಸರ್ಕಾರವು ಸದನದ ಮೇಜಿನ ಮೇಲೆ ಆರ್ಥಿಕತೆಯ ಬಗ್ಗೆ ಶ್ವೇತಪತ್ರವನ್ನು ಮಂಡಿಸುತ್ತದೆ, ಇದರಿಂದ 2014 ರವರೆಗೆ ನಾವು ಎಲ್ಲಿದ್ದೇವೆ ಮತ್ತು ಈಗ ಎಲ್ಲಿದ್ದೇವೆ ಎಂದು ತಿಳಿಯಬಹುದು ಎಂದಿದ್ದರು.
ಮೊದಲನೆಯದಾಗಿ, 2014 ರಲ್ಲಿ ಅಧಿಕಾರ ವಹಿಸಿಕೊಂಡಾಗ ಈ ಸರ್ಕಾರಕ್ಕೆ ನೀಡಲಾದ ಆಡಳಿತದ ಸ್ವರೂಪ ಮತ್ತು ವ್ಯಾಪ್ತಿ, ಆರ್ಥಿಕ ಮತ್ತು ಹಣಕಾಸಿನ ಬಿಕ್ಕಟ್ಟುಗಳ ಬಗ್ಗೆ ಸಂಸತ್ತಿನ ಗೌರವಾನ್ವಿತ ಸದಸ್ಯರಿಗೆ ಮತ್ತು ಭಾರತದ ಜನರಿಗೆ ತಿಳಿಸಲು ಇದು ಪ್ರಯತ್ನಿಸುತ್ತದೆ.
ಎರಡನೆಯದಾಗಿ, ಆರ್ಥಿಕತೆಯ ಆರೋಗ್ಯವನ್ನು ಪುನಃಸ್ಥಾಪಿಸಲು ಮತ್ತು ವರ್ತಮಾನದಲ್ಲಿ ಮತ್ತು ಅಮೃತಕಾಲದಲ್ಲಿ ಜನರ ಬೆಳವಣಿಗೆಯ ಆಕಾಂಕ್ಷೆಗಳನ್ನು ಪೂರೈಸಲು ನಮ್ಮ ಸರ್ಕಾರ ಕೈಗೊಂಡ ನೀತಿಗಳು ಮತ್ತು ಕ್ರಮಗಳ ಬಗ್ಗೆ ಅದು ಸಂಸತ್ತಿನ ಗೌರವಾನ್ವಿತ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸುತ್ತದೆ.