ಟ್ವಿಟರ್‌ ವಿರುದ್ಧ ಗಾಜಿಯಬಾದ್ ನಲ್ಲಿ ಪ್ರಕರಣ ದಾಖಲಾಗಲು ಕಾರಣವೇನು?

ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರ್‌ ನದ್ದು ಒಂದು ಕೈ ಮೇಲಿನದ್ದೇ ಪ್ರತಿಷ್ಟೆ ಎನ್ನುವಂತಿತ್ತು. ಕೆಲವೇ ಕೆಲವು ಅಕ್ಷರ ಬಳಸಿ ಸಂದೇಶಗಳನ್ನು ಬಹಳ ವೇಗವಾಗಿ ತಲುಪಬಲ್ಲ ಮಾಧ್ಯಮವಾಗಿ ಟ್ವಿಟರ್‌ ಬಳಕೆಯಲ್ಲಿತ್ತು. ಟ್ವಿಟರ್‌ 500 ದಶಲಕ್ಷ ನೋಂದಾಯಿತ ಬಳಕೆದಾರರನ್ನು ಹೊಂದಿದೆ.

ಆದರೀಗ ಈ ಪ್ರತಿಷ್ಟಿತ ಟ್ವಿಟರ್‌ ಸಂಸ್ಥೆ ಭಾರತದ ಐಟಿ ನಿಯಮ ಪಾಲಿಸದೆ ನಮ್ಮದೇಶದ ಕಾನೂನಿನ ರಕ್ಷಣೆಯನ್ನು ಕಳೆದುಕೊಂಡಿದೆ. ಐ.ಟಿ ಕಾಯ್ದೆಯ ನಿಯಮಗಳನ್ನು ಪಾಲಿಸಲು ವಿಫಲವಾಗಿರುವ ಟ್ವಿಟರ್‌ ಭಾರತದಲ್ಲಿ ಮಧ್ಯವರ್ತಿ ಮಾದ್ಯಮದ ಸ್ಥಾನಮಾನ ಕಳೆದುಕೊಂಡಿದೆ.

ಇನ್ನುಮುಂದೆ ಟ್ವಿಟರ್‌ ಗೆ ಸಂಬಂಧಿಸಿದ ಯಾವುದೇ ಘಟನೆಗಳು ನಡೆದರೂ ಅದಕ್ಕೆ ಕಾನೂನಿನ ಮೊರೆ ಹೋಗಲು ಟ್ವಿಟರ್‌ ಅನರ್ಹವಾದ ಸ್ಥಾನದಲ್ಲಿ ಬಂದು ನಿಂತಿದೆ. ಅರ್ಥಾತ್‌ ಟ್ವಿಟರ್‌ ಗೆ ಭಾರತದಲ್ಲಿ ಇನ್ನುಮುಂದೆ ಕಾನೂನುರಕ್ಷಣೆ ಸಿಗುವುದಿಲ್ಲ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ. ಸರ್ಕಾರ ನಿಗದಿ ಮಾಡಿದ ಅವಧಿಯೊಳಗೆ ಸರ್ಕಾರದ ನಿಯಮಗಳಿಗೆ ಬದ್ಧತೆ ತರದಿದ್ದರೇ ಟ್ವಿಟರ್‌ ಟ್ವೀಟಿಗರ ಮಧ್ಯವರ್ತಿ ಮಾದ್ಯಮವಾಗಿ ಭಾರತದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅಷ್ಟಕ್ಕೂ ಆಗಿದ್ದು ಇಷ್ಟೇ ಭಾರತದಲ್ಲಿನ ನೂತನ ಐಟಿ ನಿಯಮವನ್ನು ಟ್ವಿಟರ್‌ ಪಾಲಿಸಲೇಬೇಕು, ಫೇಸಬುಕ್‌ ಕೂಡಾ ಪಾಲಿಸಬೇಕು. ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿತ್ತು. ಆದರೆ ಟ್ವಿಟರ್‌ ನೂತನ ಐಟಿ ನಿಯಮಗಳನ್ನು ಪಾಲಿಸಲು ಒಪ್ಪಲಿಲ್ಲ.

ಈ ಕುರಿತು ಕಾನೂನು ಸಚಿವರು ಸರಣಿ ಟ್ವೀಟ್‌ ಮಾಡಿ, ಭಾರತೀಯ ಸಂಸ್ಕೃತಿ, ಭೌಗೋಳಿಕ ಗಾತ್ರಕ್ಕೆ ತಕ್ಕಂತೆ ನಿರಂತರ ಬದಲಾಗುತ್ತಿರುತ್ತದೆ. ಕೆಲ ಸಂದರ್ಭಗಳಲ್ಲಿ ಸಾಮಾಜಿಕ ಮಾದ್ಯಮಗಳಿಂದಾಗಿ ಸಣ್ಣ ಘಟನೆಗಳು ಕೂಡಾ ಕಿಡಿ ಹೊತ್ತಿಸುವ ಸಾಧ್ಯತೆ ಇರುತ್ತದೆ ಎಂದಿದ್ದರು.

ಉತ್ತರ ಪ್ರದೇಶದ ಗಾಜಿಯಬಾದ್‌ ನ್ನಲ್ಲಿ ಟ್ವಿಟರ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸಾಮಾಜಿಕ ಮಾದ್ಯಮದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಒಂದರಲ್ಲಿ ವೃದ್ಧ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಅವರ ದಾಡಿ ಕತ್ತರಿಸುವ ದೃಶ್ಯವಿತ್ತು, ಆದರೆ ಈ ವಿಡಿಯೋ ವೈರಲ್‌ ಆಗದಂತೆ ಟ್ವಿಟರ್‌ ತಡೆಹಿಡಿದಿಲ್ಲ ಎಂದು ಗಾಜಿಯಬಾದ್‌ ಪೊಲೀಸರು ಹೇಳಿದ್ದರು.

ಆದರೆ ಈ ವಿಡಿಯೋದ ಸತ್ಯಾಸತ್ಯತೆಯೇ ಬೇರೆ ಇತ್ತು. ಆ ವೃದ್ದ ಕೆಲವು ತಾಯಿತಗಳನ್ನು ನೀಡಿದ್ದ, ಆ ತಾಯಿತಗಳು ಪರಿಣಾಮ ಬೀರದ ಕಾರಣ ಆ ವ್ಯಕ್ತಿ ಮತ್ತು ವೃದ್ಧನ ನಡುವೆ ಜಗಳವಾಗಿತ್ತು. ಇದು ತಿರುಚಿದ ವಿಡಿಯೋ ಆಗಿತ್ತು, ಇದರ ಪ್ರಕಟಣೆ ತಡೆಹಿಡಿಯದ ಟ್ವಿಟರ್‌ ಮೌನವಾಗಿತ್ತು. ಇದು ಭಾರತದ ಐಟಿ ಕಾಯ್ದೆಯ ಉಲ್ಲಂಘನೆಯೂ ಆಗಿತ್ತು. ಘಾಝಿಯಾಬಾದ್ ಪೊಲೀಸರು ಟ್ವಿಟ್ಟರ್ ಮತ್ತು ಕೆಲವು ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿದರು.
ಆದರೆ ಈ ಘಟನೆಯ ಬಳಿಕ ಟ್ವಿಟರ್‌ ಎಚ್ಚೆತ್ತುಕೊಂಡು ಈ ಕೂಡಲೇ ಎಲ್ಲಾ ಕಾನೂನಾತ್ಮಕ ವಿಚಾರಗಳನ್ನು ಪಾಲಿಸಲು ನೋಡಲ್‌ ಆಫೀಸರ್‌ ನೇಮಿಸುತ್ತೇವೆ. ಐ.ಟಿ ಕಾನೂನಿಗೆ ಬದ್ಧವಾಗಿ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದೆ. ಕಳೆದ ತಿಂಗಳಿನಿಂದ ಟ್ವಿಟರ್‌ ನ್ನಲ್ಲಿ ಈ ಸಂಬಂದ ಹೊಸ ಗೈಡ್‌ ಲೈನ್‌ ಗಳು ಜಾರಿಯಾಗಿವೆ. ಅದು ಬಳಕೆದಾರರ ಗಮನಕ್ಕೂ ಬಂದಿರಬಹುದು.
ಒಟ್ಟಾರೆಯಾಗಿ ಇಂದಿನ ಕಾಲದ ನೆಟ್‌ ಲೋಕದಲ್ಲಿ ನೆಟ್ಟಿಗರಿಂದ ಆಗಾಗ ಪೋಸ್ಟ್‌ ಆಗುವ, ಟ್ವೀಟ್‌ ಆಗುವ ಫೋಟೋ, ವರದಿ ಯಾವುದು ಸತ್ಯ, ಯಾವುದು ಮಿಥ್ಯ, ಯಾವುದು ತಿರುಚಿದ್ದು ಎಂದು ಹೇಳಲಾಗುವುದಿಲ್ಲ. ಭಾರತದ ಹೊಸ ಐಟಿ ನಿಯಮಗಳು ಮಾಧ್ಯಮ ಸ್ವಾತಂತ್ರವನ್ನು ತಡೆಯುತ್ತದೆ ಎಂದು ಈ ಮುಂಚೆ ಟ್ವಿಟ್ಟರ್ ಹೇಳಿತ್ತು.

Latest Indian news

Popular Stories

error: Content is protected !!