ಒಡಿಶಾದಲ್ಲಿ ಜಗನ್ನಾಥ ಉತ್ಸವದ ವೇಳೆ ಪಟಾಕಿ ಸ್ಫೋಟ : 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ನವದೆಹಲಿ : ಒಡಿಶಾದ ಪುರಿಯಲ್ಲಿ ಬುಧವಾರ ರಾತ್ರಿ ಭಗವಾನ್ ಜಗನ್ನಾಥನ ಚಂದನ್ ಯಾತ್ರಾ ಉತ್ಸವದ ಸಂದರ್ಭದಲ್ಲಿ ಪಟಾಕಿಗಳು ಸ್ಫೋಟಗೊಂಡ ಪರಿಣಾಮ 20 ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಗಾಯಗೊಂಡ ಹಲವಾರು ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಚಂದನ ಯಾತ್ರೆಯ ಆಚರಣೆಯ ಭಾಗವಾಗಿ ನರೇಂದ್ರ ಕೊಳದಲ್ಲಿ ತ್ರಿಮೂರ್ತಿಗಳ ‘ಚಾಪಾ ಖೇಲಾ’ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ಪವಿತ್ರ ಕೊಳದಲ್ಲಿ ಜಲ ಕ್ರೀಡೆಗಳನ್ನು ವೀಕ್ಷಿಸಲು ನೂರಾರು ಭಕ್ತರು ಜಮಾಯಿಸಿದಾಗ ಪಟಾಕಿಗಳ ಕಿಡಿಗಳು ಅವರ ಮೇಲೆ ಬಿದ್ದವು. ಗಾಯಗೊಂಡ ಎಲ್ಲರನ್ನು ತಕ್ಷಣ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ 18 ರೋಗಿಗಳನ್ನು ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಕೆಲವು ರೋಗಿಗಳನ್ನು ಹೆಚ್ಚಿನ ವಿಶೇಷ ಆರೈಕೆಗಾಗಿ ಕಟಕ್ ಮತ್ತು ಭುವನೇಶ್ವರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು ಎಂದು ಪುರಿ ಎಸ್ಪಿ ಪಿನಾಕ್ ಮಿಶ್ರಾ ತಿಳಿಸಿದ್ದಾರೆ.

Latest Indian news

Popular Stories