ಚೆನ್ನೈ ರಿನ್ಹೋಸ್ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್

ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಸಿಎಲ್ 2025 ಆವೃತ್ತಿಯ ಚೆನ್ನೈ ರ್‍ಹಿನೋಸ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಭರ್ಜರಿ ಮುನ್ನಡೆ ಸಾಧಿಸಿದ್ದು ಗೆಲುವಿನ ವಿಶ್ವಾಸದಲ್ಲಿದೆ. ಟಾಸ್ ಗೆದ್ದ ಚೆನ್ನೈ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು ಮೊದಲ 10 ಓವರ್ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಕಳೆದುಕೊಂಡು 108 ರನ್ ಕಲೆಹಾಕಿತು.
ರಮಣ್ 14 ಎಸೆತಗಳಲ್ಲಿ 18 ರನ್ ಗಳಿಸಿದರೆ, ವಿಕ್ರಾಂತ್ 16 ಎಸೆತಗಳಲ್ಲಿ 27 ರನ್ ಗಳಿಸಿದರು ಕಾಲು ನೋವಿನಿಂದ ಬಳಲುತ್ತಿದ್ದ ಅವರು ರಿಟೈರ್ಡ್ ಹರ್ಟ್ ಆದರು. ಪೃಥ್ವಿ 10 ಎಸೆತಗಳಲ್ಲಿ 21 ರನ್ ಗಳಿಸಿದರು. ಶರಣ್ ಅಜೇಯ 17 ರನ್ ಗಳಿಸಿದರು. ಅಜಯ್ ರೋಹನ್ ಅಜೇಯ 10 ರನ್ ಗಳಿಸಿದರು. ಚಂದನ್ ಕುಮಾರ್ 2 ಓವರ್ ಗಳಲ್ಲಿ 18 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರೆ, ಗೋಲ್ಡನ್ ಸ್ಟಾರ್ ಗಣೇಶ್ 2 ಓವರ್ ಗಳಲ್ಲಿ 25 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು.
108 ರನ್ ಬಿಟ್ಟುಕೊಟ್ಟ ಕರ್ನಾಟಕ ಬುಲ್ಡೋಜರ್ಸ್ ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿತು. ರಾಜೀವ್ ಹನು 5 ಎಸೆತಗಳಲ್ಲಿ 11 ರ್ ಗಳಿಸಿ ಔಟಾದರೆ, ಚಂದನ್ ಕುಮಾರ್ 9 ಎಸೆತಗಳಲ್ಲಿ 15 ರನ್ ಗಳಿಸಿದರು. ಕರಣ್ 19 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ 44 ರನ್ ಸಿಡಿಸಿ ಅಬ್ಬರಿಸಿದರು. ಮಂಜುನಾಥ್ ಗೌಡ 2 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು.
ಚೆನ್ನೈ ಬೌಲರ್ ಗಳ ಬೆಂಡೆತ್ತಿದ ಡಾರ್ಲಿಂಗ್ ಕೃಷ್ಣ 22 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 44 ರನ್ ಗಳಿಸಿದರು. ಕಾರ್ತಿಕ್ ಜಯರಾಮ್ 4 ಎಸೆತಗಳಲ್ಲಿ ಅಜೇಯ 6 ರನ್ ಗಳಿಸಿದರು. 10 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿದ ಕರ್ನಾಟಕ 33 ರನ್‌ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿದೆ.
ಕರ್ನಾಟಕ ಬುಲ್ಡೋಜರ್ಸ್; ಕಿಚ್ಚ ಸುದೀಪ್ (ನಾಯಕ), ರಾಜೀವ್ ಹನು, ಮಂಜುನಾಥ್ ಗೌಡ, ಡಾರ್ಲಿಂಗ್ ಕೃಷ್ಣ, ಚಂದನ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಸುನೀಲ್ ರಾವ್, ಅನೂಪ್ ಭಂಡಾರಿ, ಕಾರ್ತಿಕ್ ಜಯರಾಮ್, ಕರಣ್ ಆರ್ಯನ್, ಸಾಗರ್ ಗೌಡ.
ಚೆನ್ನೈ ರ್‍ಹಿನೋಸ್: ವಿಕ್ರಾಂತ್, ಆರ್ಯ (ನಾಯಕ), ಭರತ್, ರಮಣ್, ಪೃಥ್ವಿ, ಶರಣ್, ಅಜಯ್ ರೋಹನ್, ದಶರತಿ, ಕಲೈ ಅರಸನ್, ಆಧವ್, ಶಾಂತನು.