ಗ್ಯಾಸ್ ಸ್ಟವ್ ನಿಂದ ಸಿಗರೇಟ್ ಹಚ್ಚಲು ಹೋಗಿ ಬೆಂಕಿ ಅವಘಡ: ವ್ಯಕ್ತಿ ಸಜೀವ ದಹನ

ಗ್ಯಾಸ್ಸ್ಟೋವ್ ನಿಂದ ಸಿಗರೇಟ್ ಹಚ್ಚಲು ಹೋಗಿ ವ್ಯಕ್ತಿಯೋರ್ವ ಸಜೀವದಹನಗೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

ಮನೆಯಲ್ಲಿ ರಾತ್ರಿ ಸಿಗರೇಟ್ ಸೇದಲು ಬೆಂಕಿಕಡ್ಡಿ ಹುಡುಕಿದರೂ ವ್ಯಕ್ತಿಗೆ ಸಿಕ್ಕಿಲ್ಲ. ಗ್ಯಾಸ್ ಸ್ಟವ್ ಬಳಿ ಬಂದು ಗ್ಯಾಸ್ ಆನ್ ಮಾಡಿ ಲೈಟರ್ ಗಾಗಿ ಹುಡುಕಾಡಿದ್ದಾರೆ.

ಕೆಲ ಸಮಯದ ಬಳಿಕ ಲೈಟರ್ ಸಿಕ್ಕಿದೆ. ಅಷ್ಟೊತ್ತಿಗಾಗಲೇ ಮನೆತುಂಬ ಗ್ಯಾಸ್ ಸೋರಿಕೆಯಾಗಿತ್ತು. ಸ್ಟವ್ ಹಚ್ಚುತ್ತಿದ್ದಂತೆ ಧಗ್ ಎಂದು ಬೆಂಕಿ ಹೊತ್ತಿಕೊಂಡಿದೆ.

ಅಡುಗೆ ಮನೆಯಲ್ಲಿಯೇ ವ್ಯಕ್ತಿ ಬೆಂಕಿಗಾಹುತಿಯಾಗಿದ್ದಾರೆ. ಮನೆಯ ಇನ್ನೊಂದು ಕೋಣೆಯಲ್ಲಿದ್ದ ಇಬ್ಬರು ಮಕ್ಕಳು ಹೊರಗೊಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವಷ್ಟರಲ್ಲಿ ವ್ಯಕ್ತಿ ಸುಟ್ಟು ಕರಕಲಾಗಿದ್ದರು.

Latest Indian news

Popular Stories