ಹರಿಯಾಣದಲ್ಲಿ ‘ಬೋರ್ಡ್ ಪರೀಕ್ಷೆ’ಯಲ್ಲಿ ವಿದ್ಯಾರ್ಥಿಗಳಿಂದ ‘ಮಾಸ್ ಕಾಪಿ’: ವೀಡಿಯೋ ವೈರಲ್

ಹರಿಯಾಣ: ಇಲ್ಲಿನ ನುಹ್ ಜಿಲ್ಲೆಯಲ್ಲಿ ಹರಿಯಾಣ ಬೋರ್ಡ್ ಪರೀಕ್ಷೆ 2024 ರ ಸಮಯದಲ್ಲಿ ಮಾಸ್ ಕಾಪಿಯನ್ನು ವಿದ್ಯಾರ್ಥಿಗಳು ಹೊಡೆದಿರುವ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ಮಾರ್ಚ್ 5 ರ ಮಂಗಳವಾರ ನಡೆದ 10 ನೇ ಬೋರ್ಡ್ ಪರೀಕ್ಷೆಯ ಸಮಯದಲ್ಲಿ ತವಡು ಪಟ್ಟಣದ ಚಂದ್ರಾವತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ಘಟನೆಯ ಅನೇಕ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ವೆಬ್ಸೈಟ್ನಲ್ಲಿ ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ಪರೀಕ್ಷಾ ಕೇಂದ್ರದಲ್ಲಿನ ದುಷ್ಕೃತ್ಯ ಆಘಾತಕಾರಿಯಾಗಿದೆ.

ಈ ಹಿಂದೆ ಟ್ವಿಟರ್ ನಲ್ಲಿ ಅನೇಕ ಬಾರಿ ಹಂಚಿಕೊಳ್ಳಲಾದ ವೈರಲ್ ಕ್ಲಿಪ್ಗಳಲ್ಲಿ, ಜನರು ಶಾಲಾ ಕೊಠಡಿಯ ಗೋಡೆಯನ್ನು ಹಗ್ಗದ ಸಹಾಯದಿಂದ ಹತ್ತಿ, ವಿದ್ಯಾರ್ಥಿಗಳಿಗೆ ಕಾಪಿ ಚೀಟಿಗಳನ್ನು ನೀಡುತ್ತಿರುವುದು ಕಂಡು ಬಂದಿದೆ.

ಇಷ್ಟೇ ಅಲ್ಲದೇ ಸಾಲು ಸಾಲು ಜನರು ತಮ್ಮ ವಿದ್ಯಾರ್ಥಿಗಳಿಗೆ ಕಾಪಿ ಚೀಟಿಯನ್ನು ಗೋಡೆ ಹತ್ತಿ, ಕಟ್ಟಡವನ್ನು ಹತ್ತಿ ಕಿಟಕಿ ಮೂಲಕ ನೀಡುತ್ತಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ದೃಶ್ಯಾವಳಿಯಲ್ಲಿ ಕಾಣಬಹುದಾಗಿದೆ.

Latest Indian news

Popular Stories