ಮೋದಿ ಆದಾಯ 1.6 ಲಕ್ಷ , ಹಾಕೋ ಬಟ್ಟೆ 3 ಕೋಟಿ ಇದು ಹೇಗೆ ಸಾಧ್ಯ : ರಾಹುಲ್‌ ಗಾಂಧಿ ವ್ಯಂಗ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ವೇತನ 1.6 ಲಕ್ಷ ರು. ಆದರೆ ಅವರು ಬೆಳಗ್ಗೆ ಒಂದು, ಸಂಜೆ ಒಂದು ಹೊಸ ಡ್ರೆಸ್‌ ಹಾಕ್ತಾರೆ. ಪ್ರತಿಯೊಂದರ ದರವೂ 2 -3 ಲಕ್ಷ ರು.ನಷ್ಟಿದೆ.ಇದು ಹೇಗೆ ಸಾಧ್ಯ ಎಂದು ರಾಹುಲ್ಅಂ ಗಾಂಧಿ ವ್ಯಂಗ್ಯ ಮಾಡಿದ್ದಾರೆ.

ಅವರು ತೊಡುವ ಉಡುಗೆ ಬೆಲೆಯೇ 3 ಕೋಟಿ ರು. ಆಗುತ್ತದೆ. ಅವರಿಗೆ ಇಷ್ಟೊಂದು ದುಡ್ಡು ಎಲ್ಲಿಂದ ಬರುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.ಪ್ರಸಕ್ತ ಛತ್ತೀಸ್‌ಗಢದಲ್ಲಿ ಭಾರತ್‌ ಜೋಡೋ ನ್ಯಾಯ್‌ ಯಾತ್ರೆ ಕೈಗೊಂಡಿರುವ ರಾಹುಲ್‌ ಅಲ್ಲಿ ಈ ಪ್ರಶ್ನೆ ಎತ್ತಿದ್ದಾರೆ.

ಕೇರಳದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಅಳವಡಿಸುವುದಿಲ್ಲ ಎಂದು ಕೇರಳ ಸರ್ಕಾರ ಸಡ್ಡು ಹೊಡೆದಿದೆ. ಕೇಂದ್ರದ ಯೋಜನೆಯಡಿ ಅಕ್ಕಿ ನೀಡುತ್ತಿರುವ ಕಾರಣ ರಾಜ್ಯದ ಎಲ್ಲ 14000 ಪಡಿತರ ಅಂಗಡಿಗಳಲ್ಲಿ ಮೋದಿ ಫೋಟೋ ಅಳವಡಿಕೆಗೆ ಮತ್ತು 550 ಅಂಗಡಿಗಳಲ್ಲಿ ಸೆಲ್ಫಿ ಪಾಯಿಂಟ್‌ ನಿರ್ಮಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು.

ಆದರೆ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ರೂಪಿಸಿರುವ ಈ ಯೋಜನೆ ಚುನಾವಣಾ ಪ್ರಚಾರದ ಭಾಗವಾಗಿದೆ ಎಂದು ದೂರಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

Latest Indian news

Popular Stories