ಸಿಹಿ ಮುತ್ತು ಪ್ರೀತಿಯ ಸಂಕೇತ

ಇದೇನಿದು ಮುತ್ತಿಗೂ ಒಂದು ದಿನ ಇದೆ ಅಂತೀರಾ..? ಹೌದು, ಯುನೈಟೆಡ್ ಸ್ಟೇಟ್ಸ್‍ನಲ್ಲಿ ರಾಷ್ಟ್ರೀಯ ಚುಂಬನ ದಿನವನ್ನು ಪ್ರತಿ ವರ್ಷ ಜೂನ್ 22 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಹೆಚ್ಚಾಗಿ ಅಮೆರಿಕದಲ್ಲಿ ಆಚರಿಸಲಾಗುತ್ತದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಈ ದಿನ ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಹಾಗೆ, ರಾಷ್ಟ್ರೀಯ ಚುಂಬನ ದಿನ ಬೇರೆ.. ಅಂತಾರಾಷ್ಟ್ರೀಯ ಚುಂಬನ ದಿನ ಬೇರೆ ಬೇರೆಯಾಗಿದ್ದು, ಅಂತಾರಾಷ್ಟ್ರೀಯ ಚುಂಬನ ದಿನ ಅಥವಾ ವಿಶ್ವ ಚುಂಬನ ದಿನ ಅನಧಿಕೃತ ಪ್ರತಿವರ್ಷ ಜುಲೈ 6 ರಂದು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಚುಂಬನ ದಿನ ಯುಕೆಯಲ್ಲಿ ಹುಟ್ಟಿಕೊಂಡಿತು ಮತ್ತು ಇದನ್ನು 2000 ರ ದಶಕದ ಆರಂಭದಲ್ಲಿ ವಿಶ್ವಾದ್ಯಂತ ಆಚರಿಸಲಾಗುತ್ತದೆ.

ಸಿಹಿ ಮುತ್ತು ಪ್ರೀತಿಯ ಪ್ರತೀಕ. ಬಾಲ್ಯದಿಂದ ವೃದ್ಧಾಪ್ಯದ ತನಕ ಎಲ್ಲರ ಬದುಕಿನಲ್ಲೂ ಮುತ್ತು ಎಂಬುದು ಪ್ರಮುಖ ಭಾಗ, ಬಾವವಾಗಿರುತ್ತದೆ ಎನ್ನವುದರಲ್ಲಿ ಸಂಶಯವಿಲ್ಲ. ಕಂದನಿಗೆ ಅಮ್ಮ ಅಪ್ಪ ಕೊಡುವ ಮುತ್ತು, ಹೆತ್ತವರಿಗೆ ಮಗು ಕೊಡುವ ಮುತ್ತು, ಸತಿಪತಿಗಳ ಪ್ರೀತಿಯ ಮುತ್ತು, ಪವಿತ್ರ ಪ್ರೇಮಲೋಕದಲ್ಲಿ ವಿಹರಿಸುವ ಜೋಡಿಯ ಸಿಹಿಮುತ್ತು, ಬೆಳೆದು ನಿಂತ ಮಕ್ಕಳಿಗೆ ಅಪ್ಪ ಅಮ್ಮ ಹಾರೈಕೆಯ ರೂಪದಲ್ಲಿ ಕೊಡುವ ಮುತ್ತು… ಹೀಗೆ ಮುತ್ತು ಎಂಬುದು ಮಾನವ ಸಹಜ ಕ್ರಿಯೆಗಳಲ್ಲಿ ಒಂದು. ಮಾತಿನಲ್ಲಿ ಹೇಳಲಾಗದ ಭಾವನೆಗಳನ್ನು ಮುತ್ತಿನ ಮೂಲಕವೂ ಹಂಚಿಕೊಳ್ಳಬಹುದು. ಪವಿತ್ರ ಸಂಬಂಧಗಳನ್ನು ಬೆಸೆಯುವಲ್ಲಿಯೂ ಮುತ್ತು ಸೇತುವೆಯಾಗಿದೆ.
ಸೆಲೆಬ್ರಿಟಿಗಳ ವಲಯದಲ್ಲಿ ಈ ಕಿಸ್ ಎಂಬುದು ಸಾಮಾನ್ಯ. ಪಾರ್ಟಿಗಳಲ್ಲಿ ಪರಸ್ಪರ ಆಲಿಂಗಿಸಿ ಕೆನ್ನೆಗೆ ಮುತ್ತಿಟ್ಟು ಶುಭಕೋರುವ, ಬರ ಮಾಡುವ, ಬೀಳ್ಕೊಡುವ ಕ್ರಮ ಆಪ್ತರ ನಡುವೆ ಇದೆ. ಇದು ಸುಂದರ ಸ್ನೇಹದ ಸಾಕ್ಷಿಯೂ ಹೌದು.
ನ್ಯಾಷನಲ್ ಕಿಸ್ಸಿಂಗ್ ಡೇ:-
ಸಕ್ಲಿಂಗ್ ಅಥವಾ ಹೀರುವಿಕೆ ಹಾಗೂ ಪ್ರೀಮ್ಯಾಸ್ಟಿಕೇಷನ್ ಮುಂತಾದ ಚಟುವಟಿಕೆಗಳಿಂದ ಮುತ್ತು ಅಥವಾ ಚುಂಬನವು ವಿಕಸನಗೊಂಡಿತು. ಇತರರು ತಮ್ಮ ಲಾಲಾರಸವನ್ನು ಪರೀಕ್ಷಿಸುವ ಮೂಲಕ ಸಂಭಾವ್ಯ ಸಂಗಾತಿಯ ಆರೋಗ್ಯವನ್ನು ಪರೀಕ್ಷಿಸುವುದರಿಂದ ಇದು ವಿಕಸನಗೊಂಡಿದೆ ಎಂದು ಅನೇಕ ಮಾನವಶಾಸ್ತ್ರಜ್ಞರು ತಮ್ಮ ಗ್ರಂಥದಲ್ಲಿ ಬರೆದಿರುವರು.

ಇತಿಹಾಸದ ಪ್ರತಿಯೊಂದು ಅವಧಿಯಲ್ಲಿ ಚುಂಬನವನ್ನು ವಿವಿಧ ಸಂಸ್ಕøತಿಗಳು ಮತ್ತು ಪ್ರದೇಶಗಳಲ್ಲಿ ಅನೇಕ ರೀತಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಇತಿಹಾಸಕಾರರು ಚುಂಬನದ ಆರಂಭಿಕ ಉಲ್ಲೇಖಗಳನ್ನು ಕ್ರಿ.ಪೂ 326 ರ ಸುಮಾರಿಗೆ ಅಲೆಕ್ಸಾಂಡರ್ ದಿ ಗ್ರೇಟ್‍ನ ಕಾಲದಲ್ಲಿ ಗುರುತಿಸಬಹುದು ಎಂದು ನಂಬುತ್ತಾರೆ.
ನಂತರ ಇತರ ಸಿದ್ಧಾಂತಿಗಳು ಮತ್ತು ತಜ್ಞರು ರೋಮನ್ನರಿಂದಾಗಿ ಚುಂಬನವು ಮುಖ್ಯವಾಹಿನಿಗೆ ಬಂತು. ಅವರು ಮುತ್ತಿನ ಬಗ್ಗೆ ತುಂಬಾ ಒಲವು ಹೊಂದಿದ್ದರು ಮತ್ತು ಹಲವಾರು ವಿಧದ ಚುಂಬನಗಳ ಬಗ್ಗೆ ಚರ್ಚೆ ನಡೆಸಿದ್ದರು. ಇನ್ನು, ಕೆಲವರು ಚುಂಬನದ ಬಗ್ಗೆ ಮೊದಲಿನ ಉಲ್ಲೇಖಗಳು ಭಾರತದಿಂದ ಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ವೈದಿಕ ಸಂಸ್ಕೃತ ಸಾಹಿತ್ಯದಲ್ಲಿ ನಾಲ್ಕು ಪ್ರಮುಖ ಗ್ರಂಥಗಳು ಚುಂಬನದ ಆರಂಭಿಕ ಸ್ವರೂಪಗಳನ್ನು ಉಲ್ಲೇಖಿಸುತ್ತವೆ ಎಂದು ನ್ಯಾಷನಲ್ ಟುಡೇ ವರದಿ ಮಾಡಿದೆ.
ಈ ಮುತ್ತಿನ ಚಾಲನೆಯಲ್ಲಿರುವ ಸಿದ್ಧಾಂತಗಳು ಯುಗ-ಯುಗದಲ್ಲಿ ಮುಂದುವರಿದಿದ್ದು, ಚುಂಬನದ ಅಧ್ಯಯನವು 19ನೇ ಶತಮಾನದಲ್ಲಿ ಪ್ರಾರಂಭವಾಯಿತು. ಇದನ್ನು ಫಿಲೆಮಾಟಾಲಜಿ ಎಂದು ಕರೆಯಲಾಗುತ್ತದೆ.
ಚುಂಬನವು ಆರೋಗ್ಯಕ್ಕೆ ಲಾಭ:
ಮುತ್ತಿನ ಮತ್ತೆ ಹಾಗೆ. ಮುತ್ತಿಗೆ ಜಗತ್ತನ್ನೇ ಮರೆಯುವ ಶಕ್ತಿ ಇದೆ ಎಂಬ ವಿಷಯ ನಿಮಗೆ ಗೊತ್ತೇ ಇದೆ. ತನ್ನ ಸಂಗಾತಿಗೆ ಕಿಸ್ ಮಾಡಿದ್ರೆ ಅಥವಾ ಆತನಿಂದ ಕಿಸ್ ಪಡೆದುಕೊಂಡರೆ ಮನಸಿನಲ್ಲಿರುವ ಎಲ್ಲಾ ದುಗುಡಗಳು ಒಮ್ಮೇಲೆ ದೂರವಾಗುತ್ತದೆ ಅಲ್ಲವೇ..? ಈ ಕಿಸ್‍ನಿಂದ ಪ್ರೇಮಿಗಳು ರೊಮ್ಯಾಂಟಿಕ್ ಮೂಡ್‍ಗೆ ಹೋಗೋದು ಮಾತ್ರವಲ್ಲ, ಅದರಿಂದ ಹಲವಾರು ಉಪಯೋಗಗಳು ಇವೆ. ಹೌದು ಜಗತ್ತನ್ನೇ ಮರೆಸುವ ಶಕ್ತಿ ಇರುವ ಸಂಗಾತಿಯ ಮುತ್ತಿನ ಮತ್ತಿನಲ್ಲಿ ಆರೋಗ್ಯಕರ ಲಾಭಗಳು ಸಹ ಇವೆ.

ಕಿಸ್ ಮಾಡುವುದರಿಂದ ನಿಮ್ಮ ಹೃದಯ ಬಡಿತವನ್ನು ಆರೋಗ್ಯಕರ ರೀತಿಯಲ್ಲಿ ಪುನರುಜೀವನಗೊಳಿಸುತ್ತದೆ ಅದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ’ ಎಂದು ವಿಜ್ಞಾನ ತಿಳಿಸಿದೆ. “ಇದು ನಿಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತದೆ – ರಕ್ತವು ಉತ್ತಮ, ಘನ ಶೈಲಿಯಲ್ಲಿ ಹರಿಯುತ್ತದೆ ಮತ್ತು ನಿಮ್ಮ ಎಲ್ಲಾ ಪ್ರಮುಖ ಅಂಗಗಳಿಗೆ ರಕ್ತ ಪರಿಚಲನೆಯಾಗುತ್ತದೆ ಎಂದು ತಿಳಿದು ಬರುತ್ತದೆ.

Latest Indian news

Popular Stories

error: Content is protected !!