ರಾಕೆಟ್ ಜಾಹೀರಾತಿನಲ್ಲಿ ‘ಚೀನಾ ಧ್ವಜ’ದ ಬಗ್ಗೆ ತಮಿಳುನಾಡು ಸಚಿವೆ ಸ್ಪಷ್ಟನೆ

ನವದೆಹಲಿ: ತಮಿಳುನಾಡಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ಹೊಸ ಉಡಾವಣಾ ಸಂಕೀರ್ಣಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ‘ಚೀನಾದ ಧ್ವಜ’ ಇರುವುದು ವಿವಾದಕ್ಕೆ ಕಾರಣವಾದ ಒಂದು ದಿನದ ನಂತರ, ಡಿಎಂಕೆ ನಾಯಕಿ ಮತ್ತು ಮೀನುಗಾರಿಕೆ ಸಚಿವೆ ಅನಿತಾ ಆರ್ ರಾಧಾಕೃಷ್ಣನ್ ಗುರುವಾರ ಇದು ವಿನ್ಯಾಸಕರು ಮಾಡಿದ ತಪ್ಪು ಎಂದು ಹೇಳಿದ್ದಾರೆ

ಈ ಜಾಹೀರಾತಿನಲ್ಲಿ ಭಾರತೀಯ ವಿಜ್ಞಾನಿಗಳನ್ನು ಅವಮಾನಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಟಾಲಿನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಂತರ ಡಿಎಂಕೆ ನಾಯಕಿ ಪ್ರತಿಕ್ರಿಯೆ ಬಂದಿದೆ.

ತಮಿಳುನಾಡಿನಲ್ಲಿ ಬುಧವಾರ ಪತ್ರಿಕೆಯ ಜಾಹೀರಾತಿನ ಬಗ್ಗೆ ಪ್ರಮುಖ ರಾಜಕೀಯ ವಿವಾದ ಭುಗಿಲೆದ್ದಿದೆ. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಚಿತ್ರಗಳನ್ನು ಒಳಗೊಂಡಿರುವ ಜಾಹೀರಾತಿನಲ್ಲಿ ಚೀನಾದ ಧ್ವಜವನ್ನು ಹೊಂದಿರುವ ರಾಕೆಟ್ ಅನ್ನು ಪ್ರಮುಖವಾಗಿ ಪ್ರದರ್ಶಿಸಲಾಗಿದೆ.

ಜಾಹೀರಾತಿನಲ್ಲಿ ಒಂದು ಸಣ್ಣ ತಪ್ಪು ಸಂಭವಿಸಿದೆ. ನಮಗೆ ಬೇರೆ ಯಾವ ಉದ್ದೇಶವೂ ಇಲ್ಲ. ನಮ್ಮ ಹೃದಯದಲ್ಲಿ ಭಾರತದ ಬಗ್ಗೆ ಪ್ರೀತಿ ಮಾತ್ರ ಇದೆ, ಜಾತಿ ಅಥವಾ ಧರ್ಮದ ಆಧಾರದ ಮೇಲೆ ಘರ್ಷಣೆಗಳಿಗೆ ಅವಕಾಶ ನೀಡದೆ ಭಾರತವು ಒಗ್ಗಟ್ಟಿನಿಂದ ಇರಬೇಕು ಎಂಬುದು ತಮ್ಮ ಪಕ್ಷದ ನಿಲುವಾಗಿದೆ ಎಂದು ಎಂದು ರಾಧಾಕೃಷ್ಣನ್ ತಿಳಿಸಿದ್ದಾರೆ.

Latest Indian news

Popular Stories