ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ!

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ವಿದೇಶಕ್ಕೆ ಹೊರಟು ನಿಂತಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್​ನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯಕ್ಕೆ ತೆರಳಲಿದ್ದಾರೆ.

ಅಣ್ಣಾಮಲೈ ಅವರ ಈ ಮನವಿಗೆ ಬಿಜೆಪಿ ಅನುಮೋದನೆ ನೀಡಿದೆ ಆದರೆ ಅಲ್ಲಿಯವರೆಗೆ ತಮಿಳುನಾಡು ಬಿಜೆಪಿಯ ಅಲ್ಪಾವಧಿಗೆ ಯಾರನ್ನೂ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದಿಲ್ಲ ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಯುಕೆ ವಿದೇಶಾಂಗ ಕಚೇರಿಯು 20 ವರ್ಷಗಳಿಗೂ ಹೆಚ್ಚು ಕಾಲ ಫೆಲೋಶಿಪ್ ಕಾರ್ಯಕ್ರಮವನ್ನು ನಡೆಸುತ್ತಿದೆ. ಪ್ರತಿ ವರ್ಷವೂ ಭಾರತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಕೋರ್ಸ್​ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದಲ್ಲಿ ನಡೆಯಲಿದೆ.

ಮೂರು ತಿಂಗಳ ಕಾಲ ಫೆಲೋಶಿಪ್ ಮುಂದುವರಿಸಲು ಮತ್ತು ಈ ಅವಧಿಯಲ್ಲಿ ಪಕ್ಷದ ಚಟುವಟಿಕೆಗಳಿಂದ ತಾತ್ಕಾಲಿಕ ವಿರಾಮವನ್ನು ತೆಗೆದುಕೊಳ್ಳುವಂತೆ ಅಣ್ಣಾಮಲೈ ಅವರ ಮನವಿಯನ್ನು ಪಕ್ಷದ ಹೈಕಮಾಂಡ್ ಒಪ್ಪಿಕೊಂಡಿದೆ ಎಂದು ಮೂಲವೊಂದು ದಿ ಪ್ರಿಂಟ್​ಗೆ ತಿಳಿಸಿದೆ. ಇದುವರೆಗೆ, ಅಣ್ಣಾಮಲೈ ಅನುಪಸ್ಥಿತಿಯಲ್ಲಿ ಬದಲಿ ಅಥವಾ ತಾತ್ಕಾಲಿಕ ವ್ಯವಸ್ಥೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದ ಚಟುವಟಿಕೆಗಳನ್ನುಎರಡನೇ ಹಂತದ ನಾಯಕರು ನೋಡಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿದ್ದು, ಅಣ್ಣಾಮಲೈ ಅವರು ತಮ್ಮ ಫೆಲೋಶಿಪ್ ಮುಗಿದ ನಂತರ ಪಕ್ಷದ ಚಟುವಟಿಕೆಗಳಿಗೆ ಮರಳಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಒಂದು ತಿಂಗಳ ಹಿಂದೆ ಅಣ್ಣಾಮಲೈ ಫೆಲೋಶಿಪ್‌ಗೆ ಆಯ್ಕೆಯಾಗಿದ್ದರೂ, ಅವರು ಮತ್ತು ಇತರ ತಮಿಳುನಾಡು ಬಿಜೆಪಿ ನಾಯಕರು ಪಕ್ಷದ ಹೈಕಮಾಂಡ್ ಅವರಿಗೆ ಅನುಮತಿ ನೀಡಿದರೆ ಮಾತ್ರ ಮುಂದುವರೆಯುವುದಾಗಿ ಹೇಳಿದ್ದರು.

Latest Indian news

Popular Stories