ಆನ್ಲೈನ್’ನಲ್ಲಿ ಅರ್ಡರ್ ಮಾಡಿದ್ದ ಐಸ್‌ಕ್ರೀಮ್ ಕಂಡು ಆಘಾತಕ್ಕೆ ಒಳಗಾದ ಮಹಿಳೆ – ನಿಜಕ್ಕೂ ನೀವು ಶಾಕ್ ಆಗ್ತೀರಾ!

ಮುಂಬಯಿ (THG): ಮಹಿಳೆಯೊಬ್ಬರು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್ ನಲ್ಲಿ ಮಾನವನ ಬೆರಳೊಂದು ಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಿಂದ ವರದಿಯಾಗಿದೆ.

ಮಲಾಡ್‌ನ ಉಪನಗರದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಕೋನ್ ಐಸ್‌ಕ್ರೀಮ್ ಅನ್ನು ಆರ್ಡರ್ ಮಾಡಿದ್ದರು, ಕೆಲ ಹೊತ್ತಿನ ಬಳಿಕ ಡೆಲಿವರಿ ಬಾಯ್ ಐಸ್ ಕ್ರೀಮ್ ಬಾಕ್ಸ್ ತಂದು ಕೊಟ್ಟಿದ್ದಾನೆ ಬಾಕ್ಸ್ ತೆರೆದು ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಐಸ್ ಕ್ರೀಮ್ ನಲ್ಲಿ ಏನೋ ವಿಚಿತ್ರ ವಸ್ತುವೊಂದು ಗೋಚರಿಸಿದೆ ಅದೇನೆಂದು ನೋಡಿದ ವೇಳೆ ಮಹಿಳೆ ಆಘಾತಕ್ಕೆ ಒಳಗಾಗಿದ್ದಾರೆ ಕಾರಣ ಐಸ್ ಕ್ರೀಮ್ ನಲ್ಲಿ ಪತ್ತೆಯಾಗಿರುವುದು ಮಾನವನ ಬೆರಳು ಇದನ್ನು ಕಂಡ ಮಹಿಳೆ ಬೆಚ್ಚಿಬಿದ್ದಿದ್ದಾರೆ.

ಅಲ್ಲದೆ ತನ್ನ ಮೊಬೈಲ್ ನಲ್ಲಿ ಇದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಬಳಿಕ ಐಸ್ ಕ್ರೀಮ್ ಹಿಡಿದುಕೊಂಡು ಮಲಾಡ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಮಹಿಳೆಯ ದೂರು ಆಧರಿಸಿ ಮಲಾಡ್ ಪೊಲೀಸರು ಮುಂಬೈ ಯಮ್ಮೋ ಐಸ್ ಕ್ರೀಮ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Latest Indian news

Popular Stories