ಭೀಕರ ಕಾರು ಅಪಘಾತದಲ್ಲಿ ಶ್ರೀಲಂಕಾ ಸಚಿವ ಸೇರಿದಂತೆ ಮೂವರು ಮೃತ್ಯು

ಕೊಲಂಬೊ : ಎಕ್ಸ್‌ ಪ್ರೆಸ್‌ ವೇ ಯಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶ್ರೀಲಂಕಾದ ರಾಜ್ಯ ಸಚಿವ ಸನತ್ ನಿಶಾಂತ ಮತ್ತು ಅವರ ಭದ್ರತಾ ಅಧಿಕಾರಿ ಸೇರಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಿಶಾಂತ, ಅವರ ಭದ್ರತಾ ಅಧಿಕಾರಿ ಮತ್ತು ಚಾಲಕ ಇದ್ದ ಜೀಪ್ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ವರದಿ ಮಾಡಿದೆ.

ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದು, ರಾಗಮ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಶಾಂತ ಮತ್ತು ಪೊಲೀಸ್ ಕಾನ್ಸ್ಟೇಬಲ್ ಜಯಕೋಡಿ ಆಸ್ಪತ್ರೆಗೆ ದಾಖಲಾದಾಗ ಮೃತಪಟ್ಟಿದ್ದಾರೆ.

Latest Indian news

Popular Stories