ಸ್ವಾತಂತ್ರ್ಯ ಹೋರಾಟ: ಅಮೆರಿಕ ಅಧ್ಯಕ್ಷರಿಂದ ಟಿಪ್ಪು ಸುಲ್ತಾನ್, ಹೈದರ್ ಅಲಿ ಸ್ಫೂರ್ತಿ ಪಡೆದಿದ್ದಾದರೂ ಹೇಗೆ ?

scroll.in ನಲ್ಲಿ ಪ್ರಕಟಗೊಂಡ ಅಮೀನ್ ಅಹ್ಮದ್ ರವರ ಲೇಖನ

ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಟ ಮಾಡಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ, ಸ್ವಾತಂತ್ರ್ಯ ಹೋರಾಟ ಕುರಿತು ಟಿಪ್ಪು ಸುಲ್ತಾನ್ ಮತ್ತು ಆತನ ತಂದೆ ಹೈದರ್ ಅಲಿ ಅವರು ಅಮೆರಿಕೆ ಸಂಸ್ಥಾಪಕ ಅಧ್ಯಕ್ಷರಿಂದ ಸ್ಪೂರ್ತಿ ಪಡೆದಿರುವ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದೊಂದು ಅಚ್ಚರಿಯ ಮತ್ತು ಅಷ್ಟೇ ವಾಸ್ತವಾಂಶಗಳಿಂದ ಕೂಡಿದ ವಿಸ್ಮಯಕಾರಿ ಇತಿಹಾಸ. ಈ ಇತಿಹಾಸಕ್ಕೆ ಸಾಕ್ಷಿಯಾಗಿರುವುದು ಆ ಕಾಲದಲ್ಲಿ ನಡೆದ ಪತ್ರ ವ್ಯವಹಾರ.

16 Crime


ಅಮೆರಿಕವು ಸ್ವಾತಂತ್ರ್ಯ ಪಡೆದಿದ್ದು 1776 ರ ಜುಲೈ 4 ರಂದು. ಅದಕ್ಕೂ ಮುನ್ನ ಅದು ಗ್ರೇಟ್ ಬ್ರಿಟನ್ ಆಡಳಿತಕ್ಕೆ ಒಳಪಟ್ಟಿತ್ತು. ಉತ್ತರ ಅಮೇರಿಕಾದಲ್ಲಿ ಆಂಗ್ಲರ ಆಡಳಿತಕ್ಕೆ ಒಳಪಟ್ಟಿದ್ದ 13 ವಸಾಹತುಗಳು ದೀಘ್ರ ಹೋರಾಟದ ನಂತರ ಸ್ವಾತಂತ್ರ್ಯ ಘೋಷಿಸಿದ್ದವು. ಅಮೆರಿಕೆಯಲ್ಲಿನ ಈ ಬೆಳವಣಿಗೆಯ ನಂತರ ಅಲ್ಲಿದ್ದ ಆಂಗ್ಲರು ನಿಧಾನವಾಗಿ ಸ್ವದೇಶಕ್ಕೆ ಮರಳಲಾರಂಭಿಸಿದ್ದರು. ಸಂಘಟಿತ ಹೋರಾಟದ ಮೂಲಕ ಯಶಸ್ಸು ಪಡೆದ ಅಮೆರಿಕನ್ನರು, ಇತರೆ ದೇಶಗಳಲ್ಲಿದ್ದ ಬ್ರಿಟಿಷರ ವೈರಿಗಳನ್ನೂ ಸಂಪರ್ಕಿಕಿಸಿದ್ದರು. ಆಗ ಮೈಸೂರು ರಾಜ್ಯವನ್ನು ಆಳುತ್ತಿದ್ದ ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿ ಅವರೂ ಅಮೆರಿಕೆಯ ಹೋರಾಟಗಾರರ ಸಂಪರ್ಕಕ್ಕೆ ಬಂದಿದ್ದರು. ಅಷ್ಟೇ ಅಲ್ಲ, ಅಮೆರಿಕೆಯ ಹೋರಾಟದಿಂದ ಈ ಇಬ್ಬರೂ ಸ್ಫೂರ್ತಿಯನ್ನೂ ಪಡೆದಿದ್ದರು.

Wikimedia Commons 1 Crime


2010 ರಲ್ಲಿ ನ್ಯಾಷನಲ್ ಆರ್ಕೈವ್ಸ್, ವರ್ಜಿನಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಮೆರಿಕೆಯ ಸ್ಥಾಪಕ ಅಧ್ಯಕ್ಷರಿಗೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳನ್ನು ಒಳಗೊಂಡ ವೆಬ್‌ಸೈಟ್ ನಿರ್ಮಾಣಕ್ಕೆ ಮುಂದಾಗಿತ್ತು. ಅಮೆರಿಕೆಯ ಆರಂಭಿಕ ಅಧ್ಯಕ್ಷರ, ನಿರ್ಮಾತೃಗಳ ಮಾಹಿತಿಯನ್ನು ಒಂದೆಡೆ ಕಲೆ ಹಾಕುವುದು ಈ ಯೋಜನೆಯ ಉದ್ದೇಶವಾಗಿತ್ತು. ಜಾರ್ಜ್ ವಾಷಿಂಗ್ಟನ್, ಬೆಂಜಮಿನ್ ಫ್ರಾಂಕ್ಲಿನ್, ಜಾನ್ ಆಡಮ್ಸ್, ಥಾಮಸ್ ಜೆಫರ್ಸನ್, ಅಲೆಕ್ಸಾಂಡರ್ ಹ್ಯಾಮಿಲ್ಟನ್ ಮತ್ತು ಜೇಮ್ಸ್ ಮ್ಯಾಡಿಸನ್. ಈ ಐವರು ಅಧ್ಯಕ್ಷರು ಆಗಷ್ಟೇ ಉಗಮಗೊಂಡಿದ್ದ, ಶೈಶವಾವಸ್ಥೆಯಲ್ಲಿದ್ದ ಅಮೆರಿಕೆಯ ಹಣೆಬರಹವನ್ನು ರೂಪಿಸಿದ್ದರು. ಆ ಕಾಲಕ್ಕೆ ಈ ಐವರು ಅಧ್ಯಕ್ಷರು ನಡೆಸಿದ ಪತ್ರವ್ಯವಹಾರ ಮತ್ತು ಗುಪ್ತಚರ ಮಾಹಿತಿ ಸಂಗ್ರಹಣೆ ಮುಂತಾದವುಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ. ಅಮೆರಿಕೆಯ ನಿರ್ಮಾತೃಗಳು ಬ್ರಿಟಿಷರ ಮೇಲೆ ಸೂಕ್ಷö್ಮವಾಗಿ ನಿಗಾ ಇಟ್ಟಿದ್ದನ್ನು ಈ ದಾಖಲೆಗಳು ಖಚಿತಪಡಿಸುತ್ತವೆ.
1770 ರ ದಶಕದ ಮಧ್ಯಭಾಗದ ಹೊತ್ತಿಗೆ, 1754-63 ರ ಬ್ರಿಟಿಷರ ಜೊತೆಗಿನ ಏಳು ವರ್ಷಗಳ ಯುದ್ಧದಲ್ಲಿ ಸೋಲು ಕಂಡಿದ್ದ ಫ್ರೆಂಚರು, ಅಮೆರಿಕೆಗೆ ಬೆಂಬಲ ನೀಡಲು ಮುಂದಾಗಿದ್ದರು. ಕ್ಕಾಗಿ ಬ್ರಿಟನ್‌ಗೆ ಮರಳಲು ಫ್ರೆಂಚ್ ತನ್ನ ಸಿದ್ಧ ಬೆಂಬಲವನ್ನು ಅಮೆರಿಕಕ್ಕೆ ನೀಡಿತು. ವಿಶ್ವದ ಇತರೆ ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ಭಾರತದಲ್ಲೂ ಬ್ರಿಟನ್ ಸೋಲಬಹುದು ಎಂಬ ನಿರೀಕ್ಷೆ ಅಮೆರಿಕೆಯ ಸಂಸ್ಥಾಪಕ ಅಧ್ಯಕ್ಷರದ್ದಾಗಿತ್ತು.


ಆಗಷ್ಟೇ ಮೈಸೂರು ಅರಸ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರೊಂದಿಗೆ ಅಮೆರಿಕೆಯ ಆರಂಭಿಕ ಅಧ್ಯಕ್ಷರು ಹಲವಾರು ಬಾರಿ ಪತ್ರ ವ್ಯವಹಾರ ನಡೆಸಿದ್ದರು. ಭಾರತದಲ್ಲಿ ಬ್ರಿಟಿಷರೊಂದಿಗೆ ಹೋರಾಟ ನಡೆಯುತ್ತಿರುವಾಗಲೇ ಈ ಪತ್ರ ವ್ಯವಹಾರ ನಡೆದಿದ್ದು ವಿಶೇಷ. ಅಮೆರಿಕೆಯಲ್ಲಿನ ಸ್ವಾತಂತ್ರ್ಯಕ್ಕಾಗಿನ ಹೋರಾಟವು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರ ಮೇಲೆ ಹೇಗೆ ಪರಿಣಾಮ ಬೀರಿತ್ತು ಎನ್ನುವುದನ್ನು ತಿಳಿದುಕೊಳ್ಳಲು ಕೆಲ ಪತ್ರಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಶತ್ರುಗಳ ಶತ್ರು ಅಮೆರಿಕೆಯ ಆರಂಬಿಕ ಅಧ್ಯಕ್ಷರು ಅಥವ ನಿರ್ಮಾತೃಗಳಿಗೆ ಭಾರತೀಯ ಆಡಳಿತಗಾರರು ಅಥವಾ ಅರಸರ ಪರಿಚಯ ಆಗಿದ್ದು ಪ್ರಾನ್ಸ್ ಮೂಲಕ. ಆಗ ಫ್ರಾನ್ಸ್ ಸೇನೆಯ ಲೆಫ್ಟಿನೆಂಟ್ ಜನರಲ್ ಆಗಿದ್ದ ಕಾಮ್ಟೆ ಟಿ ಟ್ರೆಸ್ಸನ್ ಅವರು, ಜೂನ್ 24, 1777 ರಂದು ಆಗ ಅಮೆರಿಕೆ ಅಧ್ಯಕ್ಷರಾಗಿದ್ದ ಬೆಂಜಮಿನ್ ಫ್ರಾಂಕ್ಲಿನ್‌ಗೆ ಬರೆದಿದ್ದ ಪತ್ರದಲ್ಲಿ. ಈ ಪತ್ರದಲ್ಲಿ ಫ್ರಾನ್ಸ್ ಸೇನಾಧಿಕಾರಿಯು, ಹೈದರ್ ಅಲಿಯನ್ನು `ಧೈರ್ಯಶಾಲಿ ಮೊಘಲ್ ರಾಜಕುಮಾರ’ ಎಂದು ಬಣ್ಣಿಸಿದ್ದರು. ಹೈದರ್ ಅಲಿ ಸಂಸ್ಥಾನದಲ್ಲಿ ಸೇವೆಯಲ್ಲಿದ್ದ ಯುರೋಪಿಯನ್ ಜೊತೆಗೆ ಅಮೆರಿಕೆಯ ಸಂಪರ್ಕ ಏರ್ಪಡಿಸಲು ಯತ್ನಿಸಿದ್ದರು. ಈ ಪತ್ರದ ಮೂಲಕವೇ ಬೆಂಜಮಿನ್ ಫ್ರಾಂಕ್ಲಿನ್ ಅವರಿಗೆ ಹೈದರ್ ಅಲಿ ಪರಿಚಯ ಆಗಿದ್ದು.
ಮೂರು ವರ್ಷಗಳ ನಂತರ, ಎರಡನೇ ಆಂಗ್ಲೋ-ಮೈಸೂರು ಯುದ್ಧ ಪ್ರಾರಂಭವಾದಾಗ, ಅಮೆರಿಕಾದ ಕ್ರಾಂತಿಕಾರಿಗಳು ಆಗಿನ ಬೆಳವಣಿಗೆಯ ಮೇಲೆ ನಿಗಾ ಇಟ್ಟಿದ್ದರು.
ಜಾನ್ ಆಡಮ್ಸ್ ಅವರು ಜೂನ್ 10, 1780 ರಲ್ಲಿ ಅಮೆರಿಕ ಕಾಂಗ್ರೆಸ್ ಅಧ್ಯಕ್ಷರಿಗೆ ಬರೆದ ಪತ್ರದಲ್ಲೂ ಹೈದರ್ ಅಲಿ ಅವರ ಉಲ್ಲೇಖ ಇತ್ತು. ಬ್ರಿಟಿಷರ ಚಲನವಲನದ ಬಗ್ಗೆ ಈ ಪತ್ರದಲ್ಲಿ ಮಾಹಿತಿ ಇತ್ತು. ಜೊತೆಗೆ ಹೈದರ್ ಅಲಿಯನ್ನು ಪ್ರಸಿದ್ಧ ಹೈದರ್ ಅಲಿ’ ಎಂದು ಉಲ್ಲೇಖಿಸಲಾಗಿತ್ತು. ಸೆಪ್ಟೆಂಬರ್ 25, 1780 ರಲ್ಲಿ ಈ ಪತ್ರವನ್ನು ಓದಲಾಗಿತ್ತು.
1781 ರ ಹೊತ್ತಿಗೆ, ಅಮೇರಿಕನ್ ಕ್ರಾಂತಿಕಾರಿಗಳು ಆಂಗ್ಲೋ-ಮೈಸೂರು ಸಂಘರ್ಷವನ್ನು ಸೂಕ್ಷö್ಮವಾಗಿ ಗಮನಿಸಲಾರಂಭಿಸಿದ್ದರು. ಯುದ್ಧದಲ್ಲಿ ಇಂಗ್ಲೀಷರು ಸೋಲಬಹುದು ಎಂಬ ವಿಶ್ವಾಸವನ್ನೂ ಹೊಂದಿದ್ದರು. ಏಪ್ರಿಲ್ 4, 1781 ರಂದು, ಎಡ್ಮಂಡ್ ಜೆನ್ನಿಂಗ್ಸ್ ರಾಂಡೋಲ್ಫ್ ಅವರು ಜಾನ್ ಆಡಮ್ ಬ್ರಸೆಲ್ಸ್ಗೆ ಬರೆದ ಪತ್ರದಲ್ಲೂ ಹೈದರಲಿ ಕುರಿತು ಉಲ್ಲೇಖ ಇತ್ತು. ಹೈದರ್ ಅಲಿ ಬಳಿ ಇದ್ದ 80,000 ಕುದರೆಗಳ ಸೈನ್ಯ ಮತ್ತು ಅರ್ಕಾಟ್‌ಗೆ ಮುತ್ತಿಗೆ ಹಾಕಿದ್ದ ವಿವರನ್ನು ಒಳಗೊಂಡಿದ್ದ ಬ್ರಿಟಿಷ್ ಪತ್ರಿಕೆಯನ್ನು ಎಡ್ಮಂಡ್ ಪ್ರಸ್ತಾಪಿಸಿದ್ದರು.

15 1 Crime


ಯುದ್ಧದಲ್ಲಿ 400 ಯುರೋಪಿಯನ್ನರು ಮತ್ತು 4000 ಭಾರತೀಯ ಸಿಪಾಯಿಗಳನ್ನು ಕಳೆದುಕೊಂಡಿದ್ದರ ಬಗ್ಗೆ, ಹೈದರ್ ಅಲಿಗೆ ಆದ ಲಾಭ, ಕರ್ನಲ್ ಮುನ್ರೋ ಅವರು ಮದ್ರಾಸ್‌ಗೆ ಪಲಾಯನಗೈದಿದ್ದ ಮಾಹಿತಿಯೂ ಈ ಪತ್ರದಲ್ಲಿತ್ತು. ಪತ್ರ ಬರೆದ ರಾಂಡೋಲ್ಫ್ ಅವರು 1775 ರಲ್ಲಿ ಜನರಲ್ ಜಾರ್ಜ್ ವಾಷಿಂಗ್ಟನ್ ಅವರಿಗೆ ಸಹಾಯಕರಾಗಿದ್ದರು. ಹಾಗೆಯೇ ಅಮೆರಿಕೆಯ ಎರಡನೇ ವಿದೇಶಾಂಗ ಕಾರ್ಯದರ್ಶಿಯೂ ಆಗಿದ್ದರು.
1825 ರಲ್ಲಿ ಅಮೆರಿಕದ ಆರನೇ ಅಧ್ಯಕ್ಷರಾದ ಜಾನ್ ಕ್ವಿನ್ಸಿ ಆಡಮ್ಸ್, ಬಾಲ್ಯದಲ್ಲಿ ದಿನಚರಿಯನ್ನು ಬರೆದಿದ್ದರು. ಅದೂ 13 ನೇ ವಯಸ್ಸಿನಲ್ಲಿ, ಅವರು ಹೈದರ್ ಅಲಿಯ ವಿಜಯಗಳ ಬಗ್ಗೆ ಏಪ್ರಿಲ್ 8, 1781 ರಂದು ಲೇಡನ್ ನಿಂದ ತಮ್ಮ ತಾಯಿ ಅಬಿಗೈಲ್ ಆಡಮ್‌ಗೆ ಪತ್ರ ಬರೆದಿದ್ದರು. ಮತ್ತು ಕರ್ನಲ್ ಫ್ಲೆಚರ್ ಸಾವು ಮತ್ತು ಕೋಲ್ ಬೈಲೆಯವರ ಸೆರೆಹಿಡಿಯುವಿಕೆಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆಗಸ್ಟ್ 28, 1781 ರಂದು, ರೋಡ್ ದ್ವೀಪದ ಪ್ರತಿನಿಧಿಗಳು ಫಿಲಡೆಲ್ಫಿಯಾದಿಂದ ರೋಡ್ ದ್ವೀಪದ ಗವರ್ನರ್ ವಿಲಿಯಂ ಗ್ರೀನ್‌ಗೆ ಪತ್ರ ಬರೆದು, ಭಾರತದಲ್ಲಿ ಬ್ರಿಟಿಷರು ಅನುಭವಿಸಿದ ದುಃಖದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಜಾನ್ ಅಡಮ್ಸ್ ಅವರು ಜೂನ್ 13, 1782 ರಲ್ಲಿ ಬೆಂಜಮಿನ್ ಫ್ರಾಂಕ್ಲಿನ್ ಅವರಿಗೆ ಬರೆದ ಪತ್ರದಲ್ಲೂ ಭಾರತದಲ್ಲಿನ ಬ್ರಿಟಿಷ್ ವಿರೋಧಿಗಳೊಂದಿಗೆ ಮುಖ್ಯವಾಗಿ ಹೈದರ್ ಅಲಿ, ಆತನ ಮಗ ಟಿಪ್ಪು ಸುಲ್ತಾನ್ ಜೊತೆಗೆ ಸಂಪರ್ಕ ಹೊಂದುವAತೆ ಸಲಹೆ ನೀಡಿದ್ದರು.
ಕೆಲವು ದಿನಗಳ ನಂತರ, ಜೂನ್ 25, 1782 ರಂದು, ಜೇಮ್ಸ್ ಮ್ಯಾಡಿಸನ್ ಫಿಲಡೆಲ್ಫಿಯಾದ ಎಡ್ಮಂಡ್ ಜೆನ್ನಿಂಗ್ಸ್ ರಾಂಡೋಲ್‌ಗೆ ಪತ್ರ ಬರೆದು ಅಮೆರಿಕದ ಸ್ವಾತಂತ್ರ‍್ಯದ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಚರ್ಚಿಸಿದರು, ಇದರಲ್ಲಿ ಹೈದರ್ ಅಲಿ ಯುದ್ಧಭೂಮಿಯಲ್ಲಿ ಇಂಗ್ಲಿಷ್‌ರ ಮೇಲೆ ಮೇಲುಗೈ ಸಾಧಿಸಿದ್ದನ್ನೂ ಪ್ರಸ್ತಾಪಿಸಿದ್ದರು. ನಂತರ ಮ್ಯಾಡಿಸನ್ ಅವರು 1809 ರಲ್ಲಿ ಅಮೆರಿಕದ ನಾಲ್ಕನೇ ಅಧ್ಯಕ್ಷರಾಗಿ ಆಯ್ಕೆಯಾದರು.
ಜಾನ್ ಆಡಮ್ಸ್ ಜಾನ್ ಜೇ – ಅಮೆರಿಕದ ಮೊದಲ ಮುಖ್ಯ ನ್ಯಾಯಮೂರ್ತಿ – ಆಗಸ್ಟ್ 13, 1782 ರಂದು ಅಮೆರಿಕೆಯಲ್ಲಿ ರಚಿಸಲಾದ ಫಿಟ್ಜರ್‌ಬರ್ಟ್ ಆಯೋಗಕ್ಕೆ ಪತ್ರ ಬರೆದಿದ್ದರು. ಬ್ರಿಟಿನ್ ಜೊತೆಗಿನ ಯುದ್ಧದಲ್ಲಿ ನಾಲ್ಕು ಶಕ್ತಿಗಳೊಂದಿಗೆ ವ್ಯವಹರಿಸುವ ಸಲಹೆ ನೀಡಲಾಗಿತ್ತು. ಈ ನಾಲ್ಕು ಶಕ್ತಿಗಳಲ್ಲಿ ಹೈದರ್ ಸೇರಿದ್ದಾನೆಯೇ ಅಥವಾ ಮರಾಠರನ್ನು ಒಂದು ಶಕ್ತಿಯಾಗಿ ಉಲ್ಲೇಖಿಸಲಾಗಿದೆಯೇ ಎನ್ನುವುದರಲ್ಲಿ ಆಡಮ್ಸ್ಗೆ ಸಂದೇಹ ಇತ್ತು.
ಸೆಪ್ಟೆಂಬರ್ 1782 ರ ಕೊನೆಯಲ್ಲಿ, ಪ್ಯಾರಿಸ್‌ನಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿದ್ದವು. ಸೆಪ್ಟೆಂಬರ್ 23, 1782 ರ ಪತ್ರವೊಂದರಲ್ಲಿ, ಜಾನ್ ಆಡಮ್ಸ್ ಅವರು ಹೇಗ್‌ನಿಂದ ರಾಬರ್ಟ್ ಆರ್ ಲಿವಿಂಗ್ಟನ್‌ಗೆ ಪತ್ರ ಬರೆದಿದ್ದರು. ಲಿವಿಂಗ್ಟನ್ ಅಮರಿಕೆಯ ಮೊದಲ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದರು. ಭಾರತದಿಂದ ಸಂತೋಷಕರ ಸುದ್ದಿ ಬರಬಹುದು ಎಂಬ ವಿಷಯ ಪತ್ರದಲ್ಲಿತ್ತು.


14 1 Crime

ಡಿಸೆಂಬರ್ 24, 1782 ರಂದು, ವರ್ಜೀನಿಯಾ ಪ್ರತಿನಿಧಿಗಳು ಕಾನ್ಫೆಡರೇಶನ್ ಕಾಂಗ್ರೆಸ್ ಫಿಲಡೆಲ್ಫಿಯಾದಿಂದ ಆಗ ವರ್ಜೀನಿಯಾದ ಗವರ್ನರ್ ಆಗಿದ್ದ ಬೆಂಜಮಿನ್ ಹ್ಯಾರಿಸನ್ ಅವರಿಗೆ ಪತ್ರ ಬರೆದರು. ಹೈದರ್ ಅಲಿಯ ಸಹಾಯದಿಂದ ಫ್ರೆಂಚರು ಮದ್ರಾಸ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಈ ಪತ್ರದಲ್ಲಿತ್ತು. ಆದರೆ, ಈ ವಿಷಯವು ಅಧಿಕೃತವಾಗಿ ದೃಢೀಕರಣ ಹೊಂದಿರಲಿಲ್ಲ.
ಜನವರಿ 20, 1783 ರಂದು ಸ್ಪೇನ್, ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕದ ನಡುವೆ ತಾತ್ಕಾಲಿಕ ಶಾಂತಿ ಒಪ್ಪಂದದ ರೂಪದಲ್ಲಿ ಹಗೆತನವನ್ನು ಕೊನೆಗೊಳಿಸಲಾಯಿತು. ಸೆಪ್ಟೆಂಬರ್ 3 ರಂದು ಬ್ರಿಟನ್ ಮತ್ತು ಅಮೆರಿಕ ನಡುವಿನ ಒಪ್ಪಂದದಂತೆ ಯುದ್ಧವನ್ನು ಕೊನೆಗೊಳಿಸಲಾಯಿತು. ಅಮೆರಿಕೆಯನ್ನು ಸ್ವತಂತ್ರ ರಾಷ್ಟçವಾಗಿ ಮಾನ್ಯ ಮಾಡಲಾಯಿತು. ಇದನ್ನು ಜನವರಿ 14, 1784 ರಂದು ಯುಎಸ್ ಕಾಂಗ್ರೆಸ್ ಅಂಗೀಕರಿಸಿತು.

79 1 Crime


ಟಿಪ್ಪು ಸುಲ್ತಾನರ ಪ್ರಮುಖ ಯುರೋಪಿಯನ್ ಮಿತ್ರ ಆಗಿದ್ದ ಫ್ರಾನ್ಸ್ ಬ್ರಿಟಿಷರೊಂದಿಗಿನ ಎಲ್ಲಾ ಮಿಲಿಟರಿ ದ್ವೇಷವನ್ನು ನಿಲ್ಲಿಸಿದ್ದರಿಂದ, ಬ್ರಿಟಿಷರಿಗೆ ಭಾರತದಲ್ಲಿ ತನ್ನ ವ್ಯವಹಾರಗಳತ್ತ ಗಮನಹರಿಸಲು ಅವಕಾಶ ಸಿಕ್ಕಿತು. ಟಿಪ್ಪು ಸುಲ್ತಾನ್ ತನ್ನ ನಿರಂತರ ಯುದ್ಧಗಳಲ್ಲಿ ಮೇಲುಗೈ ಸಾಧಿಸಿದ್ದರೂ, ಬ್ರಿಟಿಷರೊಂದಿಗೆ ಶಾಂತಿ ಕಾಯ್ದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇದ್ದಿರಲಿಲ್ಲ.
ಇಂದು ಜಗತ್ತನ್ನು ಜಾಗತಿಕ ಹಳ್ಳಿಯೆಂದು ಪರಿಗಣಿಸಲಾಗಿದೆ, ಜನರು ರಾಷ್ಟ್ರಗಳ ನಡುವೆ ಪ್ರಯಾಣಿಸಲು ಮತ್ತು ಸಂವಹನ ನಡೆಸಲು ಅಪಾರ ಸಾಧನಗಳಿವೆ. ಆದರೆ 18 ನೇ ಶತಮಾನದಲ್ಲಿಯೂ ಸಹ, ಸ್ಥಳೀಯ ರಾಜಕೀಯ ಘಟನೆಗಳು ದೂರದ ದೇಶದ ಮೇಲೆ, ಸಮಾಜದ ಮೇಲೆ ಪ್ರಭಾವ ಬೀರಿದ್ದನ್ನು ಕಾಣಬಹುದು. ನಿಜಕ್ಕೂ ಇದೊಂದು ಅಚ್ಚರಿಯ ಸಂಗತಿ.
ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಯುರೋಪಿಯನ್ ವಸಾಹತುಶಾಹಿ ಶಕ್ತಿಗಳಾದ ಇಂಗ್ಲೆಂಡ್ ಮತ್ತು ಫ್ರಾನ್ಸ್ಗೆ ಮಿಲಿಟರಿ ಮತ್ತು ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಪಾಠ ಕಲಿಸಿದ್ದರು. ಅವರ ಶೌರ್ಯ ಮತ್ತು ರಾಜಕೀಯ ಕಾರ್ಯತಂತ್ರಗಳು ದೂರದ ಉತ್ತರ ಅಮೆರಿಕಾದಲ್ಲಿಯೂ ಪ್ರತಿಧ್ವನಿಸಿದ್ದವು.

Latest Indian news

Popular Stories