ದಕ್ಷಿಣ ಭಾರತವನ್ನ ಪ್ರತ್ಯೇಕ ದೇಶವೆಂದು ಪರಿಗಣಿಸುವುದು ಅತ್ಯಂತ ಆಕ್ಷೇಪಾರ್ಹ:’KTR’ಗೆ ‘ಅಮಿತ್ ಶಾ’ತಿರುಗೇಟು

ನವದೆಹಲಿ : ಉತ್ತರ-ದಕ್ಷಿಣ ವಿಭಜನೆಯ ಬಗ್ಗೆ ಭಾರತ ರಾಷ್ಟ್ರ ಸಮಿತಿ (BRS) ಮುಖಂಡ ಕೆ.ಟಿ ರಾಮರಾವ್ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದಕ್ಷಿಣವನ್ನ ಪ್ರತ್ಯೇಕ ದೇಶವೆಂದು ಪರಿಗಣಿಸುವುದು ‘ಅತ್ಯಂತ ಆಕ್ಷೇಪಾರ್ಹ’ ಎಂದು ಹೇಳಿದರು.

ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, “ಈ ದೇಶವನ್ನ ಮತ್ತೆ ಎಂದಿಗೂ ವಿಭಜಿಸಲು ಸಾಧ್ಯವಿಲ್ಲ. ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನ ವಿಭಜಿಸಿ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದರು ಮತ್ತು ಕಾಂಗ್ರೆಸ್ ಈ ಹೇಳಿಕೆಯಿಂದ ದೂರವಿರಲಿಲ್ಲ. ದೇಶದ ಜನರು ಕಾಂಗ್ರೆಸ್’ನ ಕಾರ್ಯಸೂಚಿಯ ಬಗ್ಗೆ ಯೋಚಿಸಬೇಕು” ಎಂದು ಹೇಳಿದರು.

“ದಕ್ಷಿಣ ಭಾರತವು ಪ್ರತ್ಯೇಕ ದೇಶ ಎಂದು ಯಾರಾದರೂ ಹೇಳಿದರೆ ಅದು ಅತ್ಯಂತ ಆಕ್ಷೇಪಾರ್ಹ” ಎಂದು ಶಾ ಹೇಳಿದರು.

ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಲಿದೆ ಎಂದು ಪ್ರತಿಪಾದಿಸಿದ ಗೃಹ ಸಚಿವರು, “ದಕ್ಷಿಣದ ಐದು ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಲಿದೆ” ಎಂದು ಹೇಳಿದರು.

ಕಳೆದ ವಾರ ಎಎನ್‌ಐ ಜೊತೆ ಮಾತನಾಡಿದ ಬಿಆರ್‌ಎಸ್ ನಾಯಕ ಕೆ.ಟಿ ರಾಮರಾವ್, ‘ಉತ್ತರ ಭಾರತವು ಸಂಪೂರ್ಣವಾಗಿ ವಿಭಿನ್ನ ದೇಶ’ ಎಂದು ಹೇಳಿದ್ದರು.

Latest Indian news

Popular Stories