ಜೂನ್ 15 ರೊಳಗೆ ದೆಹಲಿ ಕೇಂದ್ರ ಕಚೇರಿ ಖಾಲಿ ಮಾಡಿ: ಎಎಪಿಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ, ಮಾರ್ಚ್ 04: ದೆಹಲಿಯ ರೋಸ್ ಅವೆನ್ಯೂ ಪ್ರದೇಶದಲ್ಲಿ ದೆಹಲಿ ಹೈಕೋರ್ಟ್‌ನ ಮೂಲಸೌಕರ್ಯ ವಿಸ್ತರಣೆಗೆ ಭೂಮಿಯನ್ನು ಮಂಜೂರು ಮಾಡಿರುವುದರಿಂದ ಆಮ್ ಆದ್ಮಿ ಪಕ್ಷ (ಎಎಪಿ) ಕೇಂದ್ರ ಕಚೇರಿಯನ್ನು ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.ದೆಹಲಿಯ ರೋಸ್ ಅವೆನ್ಯೂ ಪ್ರದೇಶದಲ್ಲಿ ತನ್ನ ಕಚೇರಿಯನ್ನು ಮುಂದುವರಿಸಲು ಎಎಪಿಗೆ ಯಾವುದೇ ಕಾನೂನು ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಜಾಗವನ್ನು ಖಾಲಿ ಮಾಡಲು ಆಮ್ ಆದ್ಮಿ ಪಕ್ಷಕ್ಕೆ ಜೂನ್ 15 ರವರೆಗೆ ಕಾಲಾವಕಾಶ ನೀಡಿದೆ. ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಆಡಳಿತರೂಢ ಪಕ್ಷಕ್ಕೆ ಆವರಣವನ್ನು ಖಾಲಿ ಮಾಡಲು ನ್ಯಾಯಾಲಯವು ಹೆಚ್ಚುವರಿ ಸಮಯವನ್ನು ನೀಡಿದೆ.

ಜಿಲ್ಲಾ ನ್ಯಾಯಾಲಯವನ್ನು ವಿಸ್ತರಿಸುವ ಉದ್ದೇಶದಿಂದ ದೆಹಲಿ ಹೈಕೋರ್ಟ್‌ಗೆ ಮಂಜೂರು ಮಾಡಲಾದ ಪ್ಲಾಟ್‌ನಲ್ಲಿರುವುದರಿಂದ ಕಚೇರಿಯನ್ನು ತೆರವು ಮಾಡಲು ಆದೇಶ ಬಂದಿದೆ. ತನ್ನ ಕಚೇರಿಗಳಿಗೆ ಭೂಮಿ ಮಂಜೂರು ಮಾಡಲು ಭೂಮಿ ಮತ್ತು ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಲು ಎಎಪಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.ಪಕ್ಷದ ಮನವಿಯನ್ನು ನಾಲ್ಕು ವಾರಗಳಲ್ಲಿ ಪ್ರಕ್ರಿಯೆಗೊಳಿಸುವಂತೆ ಭೂ ಮತ್ತು ಅಭಿವೃದ್ಧಿ ಕಚೇರಿಗೆ ನಿರ್ದೇಶನ ನೀಡಿದ್ದು, ನಿಗದಿತ ಸಮಯದೊಳಗೆ ತನ್ನ ನಿರ್ಧಾರವನ್ನು ತಿಳಿಸುವಂತೆ ಇಲಾಖೆಗೆ ತಿಳಿಸಿದೆ.

ಇನ್ನು,ಆಮ್ ಆದ್ಮಿ ಪಕ್ಷವು ರೂಸ್ ಅವೆನ್ಯೂ ನ್ಯಾಯಾಲಯದ ಬಳಿಯಿರುವ ತನ್ನ ಪಕ್ಷದ ಕಚೇರಿ ಅತಿಕ್ರಮಣವಲ್ಲ ಎಂದು ವಾದಿಸಿದೆ. ಅದನ್ನು ನ್ಯಾಯಾಲಯದ ವಿಸ್ತರಣೆಗೆ ಹಂಚುವ ಮೊದಲೇ ಪಕ್ಷಕ್ಕೆ ಹಂಚಲಾಗಿತ್ತು ಎಂದು ವಾದಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗವಿಲ್ಲ ಕಾಯ್ದೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ಎಎಪಿ ಪರ ವಕೀಲ ಎಎಂ ಸಿಂಘ್ವಿ,1993 ಮತ್ತು 2015ರ ನಡುವೆ ಈ ಭೂಮಿಯನ್ನು ಎನ್‌ಸಿಟಿ ಬಳಸಿಕೊಂಡಿದ್ದು,ಆ ಭೂಮಿಯನ್ನು ಎಎಪಿಗೆ ಹಂಚಿಕೆ ಮಾಡಲಾಗಿದೆ. ಎಎಪಿ ಭಾರತದ 6 ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ. ಇದೇ ಪ್ರದೇಶದಲ್ಲಿ ಬಿಜೆಪಿಗೆ ಕಚೇರಿ ಇದೆ.

Latest Indian news

Popular Stories