ಉಡುಪಿ: ಸಂತೆಕಟ್ಟೆಯ ಮಿಲಾಗ್ರಿಸ್ ಟ್ರಾವೆಲ್ಸ್ ಮಾಲಕ ರೋಷನ್ ಡಿಸೋಜಾ ಅವರು ಇಂದು ಬೆಳಿಗ್ಗೆ ನಿಧನರಾಗಿರುವ ಕುರಿತು ವರದಿಯಾಗಿದೆ.
ಕಲ್ಯಾಣಪುರ ಸಂತೆಕಟ್ಟೆ ನಿವಾಸಿ ರೋಷನ್ ಡಿಸೋಜಾ (40) ಅವರು ಅನಾರೋಗ್ಯದಿಂದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇಂದು ಅವರು ನಿಧನ ರಾಗಿದ್ದಾರೆ
ರಕ್ತ ವಾಂತಿ ಮಾಡುತ್ತಿದ್ದ ಇವರನ್ನು ಮಂಗಳವಾರ ಉಡುಪಿ ಆಸ್ಪತ್ರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಮೃತರು ವಿದೇಶದಲ್ಲಿರುವ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.ಈ ಹಿಂದೆ ವಿದೇಶದಲ್ಲಿ ಇದ್ದ ಅವರು ಊರಿಗೆ ಬಂದು ಮಿಲಾಗ್ರಿಸ್ ಟ್ರಾವೆಲ್ಸ್ ನ್ನು ಆರಂಭಿಸಿದ್ದರು.ಹಾಗೂ 20 ವರ್ಷದಿಂದ ಕಾರು ಚಾಲಕರಾಗಿದ್ದರು.