ಕುಂದಾಪುರ: ವಕೀಲರಾದ ಜಯಪ್ರಕಾಶ್ (53 ವರ್ಷ) ರವರು ನಿಧನರಾಗಿದ್ದಾರೆ.
ಕುಂದಾಪುರ ನ್ಯಾಯಲಯದಲ್ಲಿ ವಕೀಲರಾಗಿ ಕೆಲಸ ಮಾಡಿಕೊಡಿದ್ದು, ದಿನಾಂಕ 03/04/2023 ರಂದು ಜಯಪ್ರಕಾಶ್ ಸಾಲೀನ್ಸ್ ರವರು ಕೆಲಸದ ನಿಮಿತ್ತ ಅವರ ಕಾರಿನಲ್ಲಿ ಉಡುಪಿಗೆ ಹೋಗಿದ್ದರು. ಗೋಪಾಡಿ ಗ್ರಾಮದ ಹೂವಿನಕೆರೆ ಬಳಿ ಕಾರಿನಲ್ಲಿ ಕುಳಿತವರು ವಾಂತಿ ಮಾಡುತ್ತಿದ್ದು ತೀವೃವಾಗಿ ಅಸ್ವಸ್ಥ ರಾದವರನ್ನು ಕೂಡಲೇ ಅಲ್ಲಿಯ ಆಟೋ ಚಾಲಕರು ಅವರನ್ನು ಕೋಟೇಶ್ವರದ ಎನ್ಆರ್ ಆಚಾರ್ಯ ಆಸ್ಪತ್ರೆಗೆ ಕರೆತಂದಾಗ ಅಲ್ಲಿಯ ವೈದ್ಯರು ಜಯಪ್ರಕಾಶ್ ಸಾಲೀನ್ಸ್ ರವರನ್ನು ಪರೀಕ್ಷಿಸಿ ಮೃತ ಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2023 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.