ಬಾಲಿವುಡ್‌ ನಟ ಗುರುದತ್‌ ಸಹೋದರಿ, ‌’ತಾರೆ ಜಮೀನ್‌ ಪರ್’ ನಟಿ ಲಲಿತಾ ಲಜ್ಮಿ ನಿಧನ

ಮುಂಬೈ: ಬಾಲಿವುಡ್‌ನ ಖ್ಯಾತ ನಟ ಗುರುದತ್‌ ಅವರ ಸಹೋದರಿ ಹಾಗೂ ಆಮೀರ್‌ ಖಾನ್‌ ಅಭಿನಯದ ತಾರೆ ಜಮೀನ್‌ ಪರ್‌ ಸಿನಿಮಾದಲ್ಲಿ ಆರ್ಟ್ಸ್‌ ಟೀಚರ್‌ ಆಗಿ ನಟಿಸಿದ್ದ ನಟಿ ಲಲಿತಾ ಲಜ್ಮಿ (90 ವರ್ಷ) (Lalita Lajmi Passes Away) ಸೋಮವಾರ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಾ ನಜ್ಮಿ ಅವರು ಇಂದು ನಿಧನರಾಗಿದ್ದಾರೆ. ಈ ಬಗ್ಗೆ ಮುಂಬೈನ ಜಹಾಂಗೀರ್‌ ನಿಕೋಲ್ಸನ್‌ ಆರ್ಟ್‌ ಫೌಂಡೇಷನ್‌ ದೃಢಪಡಿಸಿದ್ದು, “ಸೂಕ್ಷ್ಮ ಸಂವೇದನೆಯ ಕಲಾವಿದೆ, ಕ್ಲಾಸಿಕಲ್‌ ಡಾನ್ಸ್‌ನಲ್ಲೂ ಅಪಾರ ಆಸಕ್ತಿ ಹೊಂದಿದ್ದ ಅವರ ಅಗಲಿಕೆಯ ಸುದ್ದಿ ದುಃಖ ತಂದಿದೆ” ಎಂದು ಸಂಸ್ಥೆ ಸಂತಾಪ ಸೂಚಿಸಿದೆ.

ಮೂಲತ ಲಲಿತಾ ಲಜ್ಮಿ ಅವರು ಚಿತ್ರ ಕಲಾವಿದೆಯಾಗಿದ್ದು, ಅವರ ಪೇಂಟಿಂಗ್‌ಗಳು ಹೆಚ್ಚು ಖ್ಯಾತಿ ಪಡೆದಿವೆ. ನೂರಾರು ಎಕ್ಸಿಬಿಷನ್‌ನಲ್ಲಿ ಅವರು ಬಿಡಿಸಿದ ಚಿತ್ರಗಳು ಪ್ರದರ್ಶನಗೊಂಡಿವೆ. ತಾರೆ ಜಮೀನ್‌ ಪರ್‌ ಸಿನಿಮಾದಲ್ಲಿ ಲಲಿತಾ ಅವರು ಅತಿಥಿ ಪಾತ್ರ ನಿರ್ವಹಿಸಿದ್ದರು. ಆದರೂ, ಇದು ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. 

ಲಜ್ಮಿ ಅವರು 1932 ರಲ್ಲಿ ಕೋಲ್ಕತ್ತಾದಲ್ಲಿ ಲೇಖಕರಾಗಿದ್ದ ತಂದೆ ಮತ್ತು ಬಹುಭಾಷಾ ಬರಹಗಾರ ತಾಯಿಗೆ ಜನಿಸಿದರು. ಅವರು ಶಾಸ್ತ್ರೀಯ ನೃತ್ಯದಲ್ಲಿ ತೀವ್ರ ಆಸಕ್ತಿ ಹೊಂದಿರುವ ಸ್ವಯಂ-ಕಲಿಸಿದ ಕಲಾವಿದರಾಗಿದ್ದರು. ದಶಕಗಳಲ್ಲಿ, ಅವರು ಪ್ಯಾರಿಸ್, ಲಂಡನ್ ಮತ್ತು ನೆದರ್ಲ್ಯಾಂಡ್ಸ್‌ನ ಅಂತಾರಾಷ್ಟ್ರೀಯ ಕಲಾ ಗ್ಯಾಲರಿಗಳಲ್ಲಿ ಹಲವಾರು ಪ್ರದರ್ಶನಗಳನ್ನು ನಡೆಸಿದ್ದರು.

Latest Indian news

Popular Stories