ಹರ್ಯಾಣ: ವಿ.ಎಚ್.ಪಿ ಸಂಘಟಿತ ಮೆರವಣಿಗೆಯ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿದ ಹರ್ಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಲ, ಸರಿಯಾದ ಮಾಹಿತಿ ನೀಡದೆ ಧಾರ್ಮಿಕ ಮೆರವಣಿಗೆ ನಡೆಸಿದ್ದು ಹಿಂಸಾಚಾರಕ್ಕೆ ಕಾರಣ ಎಂದು ಹೇಳಿದ್ದಾರೆ.
ಈಗಾಗಲೇ ಈ ಹಿಂಸಾಚಾರದಲ್ಲಿ ಐದು ಮಂದಿ ಮೃತಪಟ್ಟಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. ಈಗ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಶಾಂತಿಯ ವಾತವರಣವಿದೆ. ಈ ಹಿಂಸಾಚಾರದ ಕುರಿತು ಹಲವು ವಿಚಾರಗಳು ಬೆಳಕಿಗೆ ಬರುತ್ತಿದೆ.ಪೊಲೀಸರು ತನಿಖೆ ನಡೆಸುತ್ತಿದ್ದು ವರದಿ ಬಂದ ಮೇಲೆ ಸಂಪೂರ್ಣ ಮಾಹಿತಿ ದೊರಕಲಿದೆ ಎಂದು ಹೇಳಿದರು.