“ಅಗ್ನಿವೀರ್ ಯೋಜನೆ ಮರುಪರಿಶೀಲನೆಯಾಗಬೇಕು”: ನಿತೀಶ್ ಕುಮಾರ್ ಪಕ್ಷದ ಪ್ರಮುಖ ನಾಯಕ – ಬಿಜೆಪಿಗೆ ಮೊದಲ ಶಾಕ್!

ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯು ಮೊದಲ ಎರಡಕ್ಕಿಂತ ವಿಭಿನ್ನವಾಗಿರುತ್ತದೆ ಎಂಬುದಕ್ಕೆ ಸಾಕ್ಷಿಯೆಂಬಂತೆ ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಕೇಂದ್ರದ ಅಗ್ನಿಪಥ್ ಯೋಜನೆಯನ್ನು ಮರು ಪರಿಶೀಲಿಸಲು ನಮ್ಮ ನವ್ಪಕ್ಷವು ಪ್ರಯತ್ನಿಸುತ್ತದೆ ಎಂದು ಜನತಾ ದಳ ಯುನೈಟೆಡ್ (ಜೆಡಿಯು) ಉನ್ನತ ನಾಯಕರೊಬ್ಬರು ಹೇಳಿದ್ದಾರೆ.

ಬಿಜೆಪಿ ಮಿತ್ರ ಪಕ್ಷ ಜೆಡಿಯುನ ಮುಖ್ಯ ವಕ್ತಾರ ಕೆಸಿ ತ್ಯಾಗಿ ಮತ್ತು ಅದರ ಮುಖ್ಯಸ್ಥ ನಿತೀಶ್ ಕುಮಾರ್ ಅವರ ನಿಕಟವರ್ತಿ ಮಾತನಾಡಿ, ” ಹಲವಾರು ರಾಜ್ಯಗಳಲ್ಲಿ ಯೋಜನೆಯ ವಿರುದ್ಧ ಅಸಮಾಧಾನವಿದೆ ಎಂದು ಹೇಳಿದ್ದಾರೆ. ಆದ್ದರಿಂದ ನಾವು ಅಗ್ನಿವೀರ್ ಮರು ಪರಿಶೀಲನೆ ಕೋರುತ್ತೇವೆ.
ನಾವು ಅದನ್ನು ವಿರೋಧಿಸುವುದಿಲ್ಲ ಎಂದು ಅವರು ಹೇಳಿದರು.

ಯೋಜನೆಯಡಿಯಲ್ಲಿ, 17.5 ವರ್ಷ-21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇರಿಸಲಾಗುತ್ತದೆ. ಈ ನೇಮಕಾತಿಯಲ್ಲಿ ಶೇ.25ರಷ್ಟನ್ನು ಇನ್ನೂ 15 ವರ್ಷಗಳ ಕಾಲ ಉಳಿಸಿಕೊಳ್ಳಲು ಅವಕಾಶವಿದೆ.

ನಮ್ಮ ಸುದ್ದಿಗಳು ನಿಮಗೆ ಪ್ರತಿಕ್ಷಣ ತಲುಪಲು ಈ ವಾಟ್ಸಪ್ ಗ್ರೂಪ್ ಸೇರಿ:

https://chat.whatsapp.com/FQgpe9bDMu71GWTRj7N3G5

Latest Indian news

Popular Stories