ಬೆಂಗಳೂರು : ರಾಜ್ಯದಲ್ಲಿ ಈಗ ಸಂಪುಟ ರಚನೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದಾರೆ. ಈ ಸೂಚನೆ ನಾಳೆ ಅಥವಾ ನಾಡಿದ್ದು ಬರಬಹುದು ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.
ಸದ್ಯ ರಾಜಧಾನಿಯಲ್ಲಿ ಸಚಿವ ಸಂಪುಟ ರಚನೆಯದ್ದೇ ಸುದ್ದಿ. ಯಾರು ಮಂತ್ರಿಯಾಗುತ್ತಾರೆ, ಯಾರಿಗೆ ಮಂತ್ರಿ ಸ್ಥಾನ ತಪ್ಪಬಹುದು ಎಂಬ ಚರ್ಚೆ ನಡೆಯುತ್ತಲೇ ಇದೆ.
ಈ ಬಾರಿ ಹೊಸಬರಿಗೆ ಅವಕಾಶ ಸಿಗಬಹುದು ಎಂಬ ಅಭಿಪ್ರಾಯ ಎಲ್ಲರಿಂದಲೂ ಕೇಳಿ ಬರುತ್ತಿದೆ. ಅನುಭವಿ ನಾಯಕರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಬಹುದು. ಯುವ ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬಹುದು ಎಂಬ ಮಾತೂ ಕೇಳಿ ಬರುತ್ತಿದೆ. ಒಂದೆರಡು ದಿನಗಳಲ್ಲಿ ಇದು ಸ್ಪಷ್ಟವಾಗಬಹುದು.
ಸಚಿವ ಸಂಪುಟಕ್ಕೆ ಸೇರುವುದಕ್ಕಾಗಿ ಮುಖಂಡರ ನಡುವೆ ಪೈಪೋಟಿ ಶುರುವಾಗಿದೆ. ಮಾಜಿ ಸಿಎಂ ಯಡಿಯೂರಪ್ಪಅವರ ಆಪ್ತರ ಪೈಕಿ ಯಾರಿಗೆಲ್ಲ ಸಚಿವ ಸ್ಥಾನ ಸಿಗಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.
ಉಪಮುಖ್ಯಮಂತ್ರಿ ಸ್ಥಾನಕ್ಕೆ 6 ಜನ ನಾಯಕರ ಹೆಸರುಗಳು ಚರ್ಚೆಯಲ್ಲಿವೆ. ಆರ್. ಅಶೋಕ, ಶ್ರೀರಾಮುಲು, ಸುನೀಲಕುಮಾರ್, ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ, ಅರವಿಂದ ಲಿಂಬಾವಳಿ ಹೆಸರುಗಳು ಚರ್ಚೆಯಲ್ಲಿವೆ. ಆದರೆ, ಉಪಮುಖ್ಯಮಂತ್ರಿ ಸ್ಥಾನದ ಅಗತ್ಯವೇ ಇಲ್ಲ ಎಂಬ ಅಭಿಪ್ರಾಯವೂ ಬಿಜೆಪಿಯ ಕೆಲ ಹಿರಿಯ ನಾಯಕರಲ್ಲಿದೆ. ಈ ಬಾರಿ ಡಿಸಿಎಂ ಹುದ್ದೆ ಇರುವುದರ ಬಗ್ಗೆಯೇ ಅನುಮಾನ ಹೆಚ್ಚಿದೆ.
ಸುರೇಶಕುಮಾರ್, ಶ್ರೀರಾಮುಲು, ಮಾಧುಸ್ವಾಮಿ, ಪ್ರೀತಂಗೌಡ, ಪೂರ್ಣಿಮಾ ಶ್ರೀನಿವಾಸ, ರೂಪಾಲಿ ನಾಯ್ಕ್, ಕೋಟಾ ಶ್ರೀನಿವಾಸ ಪೂಜಾರಿ, ಕೆ.ಎಸ್. ಈಶ್ವರಪ್ಪ, ಸುನೀಲಕುಮಾರ್, ಅರಗ ಜ್ಞಾನೇಂದ್ರ, ಅರವಿಂದ ಲಿಂಬಾವಳಿ, ಉಮೇಶ ಕತ್ತಿ, ಸಿ.ಪಿ. ಯೋಗೇಶ್ರ, ಎಸ್. ಅಂಗಾರ, ಮುರುಗೇಶ ನಿರಾಣಿ ಮುಂತಾದ ಹೆಸರುಗಳು ಓಡಾಡುತ್ತಿವೆ.
ವಲಸಿಗರ ಪೈಕಿ ಎಸ್ ಟಿ ಸೋಮಶೇಖರ್, ಬಿಸಿ ಪಾಟೀಲ್, ಡಾ.ಕೆ.ಸುಧಾಕರ್,
ಕೆಸಿ ನಾರಾಯಣಗೌಡ, ಕೆ.ಗೋಪಾಲಯ್ಯ, ಬೈರತಿ ಬಸವರಾಜು, ಎಂಟಿಬಿ ನಾಗರಾಜ, ಶಿವರಾಂ ಹೆಬ್ಬಾರ್, ಆರ್.ಶಂಕರ್ ಅವರ ಹೆಸರುಗಳು ಚರ್ಚೆಯಲ್ಲಿವೆ.
ಹೊಸಬರ ಪೈಕಿ ಚರ್ಚೆಯಲ್ಲಿರುವ ಹೆಸರುಗಳಲ್ಲಿ ಅಭಯ್ ಪಾಟೀಲ್, ಆರ್ ಮುನಿರತ್ನ, ಅರವಿಂದ ಬೆಲ್ಲದ್, ಎಂಪಿ ಕುಮಾರಸ್ವಾಮಿ, ಕುಡುಚಿ ರಾಜೀವ್, ಎಂಪಿ ರೇಣುಕಾಚಾರ್ಯ, ರವೀಂದ್ರ ನಾಥ್, ಮೂಡಾಳು ವಿರೂಪಾಕ್ಷಪ್ಪ,
ದತ್ತಾತ್ರೇಯ ಪಾಟೀಲ ರೇವೂರ, ಕೆಜಿ ಬೋಪಯ್ಯ, ಅಪ್ಪಚ್ಚು ರಂಜನ್, ಬಸನಗೌಡ ಪಾಟೀಲ್ ಯತ್ನಾಳ್, ಜಿ.ತಿಪ್ಪಾರೆಡ್ಡಿ ಹೆಸರುಗಳು ಸೇರಿವೆ.
ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಪೈಕಿ ಹಲವರಿಗೆ ಬೊಮ್ಮಾಯಿ ಸಂಪುಟದಲ್ಲಿ ಪ್ರಾತಿನಿದ್ಯ ಸಿಗಲಿಕ್ಕಿಲ್ಲ ಎಂಬ ಚರ್ಚೆಯೂ ನಡೆಯುತ್ತಿದೆ. ಆನಂದ್ ಸಿಂಗ್, ಜಗದೀಶ್ ಶೆಟ್ಟರ್, ಸಿಸಿ ಪಾಟೀಲ್, ಪ್ರಭು ಚೌವ್ಹಾನ್, ಶ್ರೀಮಂತ ಪಾಟೀಲ್, ಶಶಿಕಲಾ ಜೊಲ್ಲೆ ಅವರಿಗೆ ಸಚಿವ ಸ್ಥಾನ ಸಿಗಲಿಕ್ಕಿಲ್ಲ ಎಂಬ ಚರ್ಚೆ ನಡೆಯುತ್ತಿದೆ.