ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾಪು ತಾಲೂಕಿನ 2023- 24 ನೇ ಅವಧಿಯ ಅಧ್ಯಕ್ಷರಾಗಿ ನಸೀರ್ ಅಹಮದ್ ಆಯ್ಕೆ


ಕಾಪು : ಇಂದು ಕಾಪುವಿನಲ್ಲಿ ನಡೆದ ಕಾಪು ತಾಲೂಕು ಸಮಿತಿಯ ಸಭೆಯಲ್ಲಿ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ತಾಲೂಕು ಅಧ್ಯಕ್ಷ ರಾಗಿ ಆರಿಸಲಾಯಿತು.


ತಾಲೂಕು ಉಪಾಧ್ಯಕ್ಷರಾಗಿ ಮುಸ್ತಾಕ್ ಇಬ್ರಾಹಿಂ ಬೆಳಪು , ಕಾರ್ಯದರ್ಶಿಯಾಗಿ ರಿಯಾಜ್ ಅಹಮದ್ ನಜೀರ್ ಮುದರ0ಗಡಿ, ಜತೆ ಕಾರ್ಯದರ್ಶಿಯಾಗಿ ವೈ. ಎಮ್ ಇಲಿಯಾಸ್ ಕಟಪಾಡಿ , ಕೋಶಾಧಿಕಾರಿಯಾಗಿ ಮೊಹಮ್ಮದ್ ಆಝಮ್ ಶೇಕ್ ಉಚ್ಚಿಲ ಅವರನ್ನು ನೇಮಿಸಲಾಯಿತು.


ಮತ್ತು ಬಿ. ಎಮ್ ಮೊಯಿದಿನ್ ಕಟಪಾಡಿ, ಅಬ್ದುಲ್ ರಜಾಕ್ ಕಟಪಾಡಿ, ಅಮೀರ್ ಹಂಝ ಕಾಪು , ರಮೀಜ್ ಹುಸೈನ್ ಪಡುಬಿದ್ರಿ, ಅಬ್ದುಲ್ ಹಮೀದ್ ಪಡುಬಿದ್ರಿ, ಮುಹಮ್ಮದ್ ಇಕ್ಬಾಲ್ ಸಾಹೇಬ್ ಮಜೂರ್, ಮುಹಮ್ಮದ್ ಸಾದಿಕ್ ದಿನಾರ್, ಮುಹಮ್ಮದ್ ಸುಲೇಮಾನ್ ಮಲ್ಲಾರ್ ಇವರುಗಳು ತಾಲೂಕು ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.
ಅಬ್ದುರಹಮಾನ್ ಚಂದ್ರ ನಗರ , ಮೊಹಮ್ಮದ್ ಅಷ್ಪಾಕ್ ಮೊಹಸಿನ್ ಮಲ್ಲಾರ್, ಎಮ್. ಎಸ್. ಅಬ್ಬಾಸ್ ಹಾಜಿ ಕನ್ನಂಗಾರ್ , ಅಬೂಬಕರ್ ಪಾದೂರ್ ಮತ್ತು ಸಿರಾಜ್ ಉಚ್ಚಿಲ
ಅವರನ್ನು ತಾಲೂಕು ಸಮಿತಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಯಿತು. ಜಿಲ್ಲಾ ಸಮಿತಿಗೆ ಎಮ್. ಪಿ. ಮೊಯಿದಿನಬ್ಬ, ಅಬ್ದುರಹಮಾನ್ ಕನ್ನಂಗಾರ್ ರವರು ಜಿಲ್ಲಾ ವತಿಯಿಂದ ನೇಮಿಸಲ್ಪಟ್ಟಿರುವರು.


ಅನ್ವರ್ ಅಲಿ ಯವರ ಕುರ್ ಆನ್ ಪಠಣ ದೊಂದಿಗೆ ಸಭೆ ಪ್ರಾರಂಭವಾಯಿತು.


ಜನಾಬ್ ಶಬೀಹ್ ಅಹಮದ್ ಕಾಝಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರಿಸ್ ರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ಸಲಾಹುದ್ದಿನ್ ಹೂಡೆ ಚುನಾವಣಾ ಪ್ರಕ್ರಿಯೆ ನಡೆಸಿ ಕೊಟ್ಟರು.


ಹಾಲಿ ಅಧ್ಯಕ್ಷರಾದ ಶಭಿ ಅಹ್ಮದ್ ಖಾಝಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ರಿಯಾಜ್ ಅಹಮದ್ ನಜೀರ್ ಧನ್ಯವಾದವಿತ್ತರು.
ಸಭೆಯಲ್ಲಿ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ , ಸಂಘಟನಾ ಕಾರ್ಯದರ್ಶಿ ಎಸ್. ಕೆ. ಇಕ್ಬಾಲ್ ಉಪಸ್ಥಿತರಿದ್ದರು.

Latest Indian news

Popular Stories