ದ್ವ- ದಶಮಾನೋತ್ಸವದ ಆಚರಣೆಗಳ ಸಂಭ್ರಮದಲ್ಲಿರುವ ಅನುಗ್ರಹ ಮಹಿಳಾ ಕಾಲೇಜಿನ ಟ್ರಸ್ಟ್ ವತಿಯಿಂದ ದೇಶ ಮತ್ತು ವಿದೇಶಗಳಲ್ಲಿ ವಿಶಿಷ್ಟ ಸೇವೆಗೈದ ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಕ್ಷೇತ್ರದ ಹೀರೋ, ಬೀದರಿನ ಪ್ರತಿಷ್ಠಿತ ‘ ಶಾಹೀನ್ ‘ ವಿದ್ಯಾ ಸಂಸ್ಥೆಗಳ ರುವಾರಿ, ಅರೋಗ್ಯ ಮತ್ತು ಸಮಾಜ ಸುಧಾರಣಾ ಕ್ಷೇತ್ರದಲ್ಲಿ ಅಪಾರ ಕೊಡುಗೆಗಳನ್ನು ದೇಶಕ್ಕೆ ನೀಡಿದ ಡಾ| ಅಬ್ದುಲ್ ಖದೀರ್ ಸಾಹಬ್, ಶಿವಮೊಗ್ಗದಲ್ಲಿ ಅಲ್ ಹಬೀಬ್ ವಿದ್ಯಾ ಸಂಸ್ಥೆಗಳ ಮೂಲಕ ಶೈಕ್ಷಣಿಕ ರಂಗದಲ್ಲಿ, ಜಿ. ಎಮ್. ಆಸ್ಪತ್ರೆಗಳ ಮೂಲಕ ಅರೋಗ್ಯ ಕ್ಷೇತ್ರದಲ್ಲಿ ,ಮಧ್ಯ ಪ್ರಾಚ್ಯದಲ್ಲಿ ವ್ಯಾಪಾರ ಸಂಸ್ಥೆಗಳ ಮೂಲಕ ನೂರಾರು ಜನರಿಗೆ ಕೆಲಸ ಹಾಗೂ ಸಾಮಾಜಿಕ ಸೇವಾ ರಂಗದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಎಂಜಿನಿಯರ್ ಮುಹಮ್ಮದ್ ಇಬ್ರಾಹಿಂ, ದ. ಕ. ಜಿಲ್ಲೆಯ ವಿಟ್ಲದ ಬೊಳಂತಿಮೊಗರಿನವರಾದ ಈಗ ದೇಶ-ವಿದೇಶಗಳಲ್ಲಿ ತಮ್ಮ ವೈಜ್ಞಾನಿಕ ಸೇವೆಗಳ ಮೂಲಕ ಖ್ಯಾತಿಯನ್ನು ಪಡೆದ ವಿಜ್ಞಾನಿ,ಪ್ರೊಫೆಸರ್ ಅಬ್ದುಲ್ ರಹ್ಮಾನ್ ಬೇಗ್, ವಿವಿಧ ಸಮಾಜ ಮುಖಿ ಸಂಘ ಸಂಸ್ಥೆಗಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ, ಕಲ್ಲೂರ ಎಜುಕೇಷನ್ ಟ್ರಸ್ಟ್ ನ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆಗಳನ್ನು ಸಲ್ಲಿಸುತ್ತಿರುವ, ಕಲ್ಲೂರ ಡೆವಲಪ್ಮೆಂಟ್ ಉದ್ಯಮದ ಮೂಲಕ ನೂರಾರು ಮಂದಿಗೆ ಕೆಲಸ ನೀಡುತ್ತಿರುವ ಪಿಎಂಜೆಫ್-ಲಯನ್ ಡಾ| ಇಬ್ರಾಹಿಮ್ ಹಾಜಿ ಕಲ್ಲೂರ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಜೊತೆ ಜೊತೆಯಾಗಿ ತೊಡಗಿಸಿಕೊಂಡಿರುವ ಅಂಕಣಗಾರ್ತಿ, ಸಂಪಾದಕಿ, ಕೌನ್ಸಿಲರ್… ಹೀಗೆ ಬಹುಮುಖಿಯಾಗಿ ಸೇವೆಸಲ್ಲಿಸುತ್ತಿರುವ ಮಂಗಳೂರಿನ ಶಹನಾಜ್ ಎಂ. ಹೀಗೆ 5 ಮಂದಿ ಗಣ್ಯರನ್ನು ಶಾಲು ಹೊದಿಸಿ ಸ್ಮರಣಿಕೆಗಳನ್ನು ನೀಡಿ ಊರ ಮತ್ತು ಪರವೂರ ನಾಗರಿಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಂತಿ ಪ್ರಕಾಶನದ ಉಪಾಧ್ಯಕ್ಷರಾದ ಜನಾಬ್ ಕೆ. ಎಂ. ಶರೀಫ್ ,
ಶ್ರೀಮಾನ್ ಮುಹಮ್ಮದ್ ಶಾಹಿದ್- ಸಮನ್ವಯ ಶಿಕ್ಷಕರ ಸಂಘ, ಶ್ರೀಯುತ ಹಂಝ ಯು. ಎನ್. – AITA, ಜನಾಬ್ ಯಹ್ಯಾ ತಂಗಳ್, ಜನಾಬ್ ಅಬ್ದುಸ್ಸಲಾಮ್ ಉಪ್ಪಿನಂಗಡಿ- JIH ,ಜನಾಬ್ ಹನೀಫ್ ಹಾಜಿ ಗೋಳ್ತಮಜಲು, ಜನಾಬ್ ಏಜಾಝ್ ಅಹ್ಮದ್ ಮತ್ತು ಇಪ್ತಿಕಾರ್ ಅಹ್ಮದ್ ಖಾನ್(ಅಲ್ ಹಬೀಬ್ ಎಜುಕೇಶನ್ ಟ್ರಸ್ಟ್,ಶಿವಮೊಗ್ಗ) ಜನಾಬ್ ಸುಲೈಮಾನ್ B.S., ಆಡಳಿತ ಮಂಡಳಿಯ ಅಧ್ಯಕ್ಷರಾದ ಜನಾಬ್ ಯಾಸೀನ್ ಬೇಗ್, ಸಂಚಾಲಕ ಜನಾಬ್ ಅಮಾನುಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಶಾಹುಲ್ ಹಮೀದ್, ಜೊತೆ ಕಾರ್ಯದಶಿಯಾದ ಸುಲೈಮಾನ್ ಅಪೋಲೋ, ಖಜಾಂಚಿ ಶ್ರೀಯುತ ಹೈದರ್ ಅಲಿ ನೀರ್ಕಜೆ, ಸದಸ್ಯರುಗಳಾದ ಜನಾಬ್ ಅಮೀನ್ ಅಹ್ಸನ್, ಶ್ರೀಯುತ ಅಬ್ದುಲ್ಲ ಕುಂಞ, ಶ್ರೀಯುತ ಅಬ್ದುಲ್ಲ ಚೆಂಡಾಡಿ, ಶ್ರೀಯುತ ಇಬ್ರಾಹಿಂ ಚೆಂಡಾಡಿ, ಶ್ರೀಯುತ ಮುಖ್ತಾರ್ ಅಹಮ್ಮದ್ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಹೇಮಲತ ಬಿ.ಡಿ. ಅಡ್ವೈಸರಿ ಕಮಿಟಿ ಸೆಕ್ರಟರಿ ಶ್ರೀಮತಿ ಮಮಿತಾ ಎಸ್ . ರೈ ಉಪಸ್ಥಿತರಿದ್ದರು.