ಲಂಡನ್ ನಲ್ಲಿ ಟ್ರಕ್ ಡಿಕ್ಕಿಯಾಗಿ ಭಾರತದ ವಿದ್ಯಾರ್ಥಿನಿ ಸಾವು

ಲಂಡನ್: 33 ವರ್ಷದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಲಂಡನ್ ನಲ್ಲಿ ನಡೆದ ಟ್ರಕ್ ಅಪಘಾತದಲ್ಲಿ ಮೃತಪಟ್ಟಿದ್ದಾಳೆ.

ಕಳೆದ ವಾರ ಸೆಂಟ್ರಲ್ ಲಂಡನ್ ನಲ್ಲಿ ತನ್ನ ಮನೆಗೆ ಸೈಕಲ್ ನಲ್ಲಿ ಮನೆಗೆ ಹೋಗುವಾಗ ಟ್ರಕ್ ಗೆ ಡಿಕ್ಕಿ ಹೊಡೆದಿದ್ದಾಳೆ. ಈ ಹಿಂದೆ ನೀತಿ ಆಯೋಗದಲ್ಲಿ ಕೆಲಸ ಮಾಡಿದ್ದ ಚೈಸ್ತಾ ಕೊಚ್ಚರ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಬಿಹೇವಿಯರಲ್ ಸೈನ್ಸ್ ನಲ್ಲಿ ಪಿಎಚ್ ಡಿ ಮಾಡುತ್ತಿದ್ದರು.

ಮೃತರು ‘ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ದ (ಸಿಒಎಐ) ಮಹಾನಿರ್ದೇಶಕ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ.ಎಸ್.ಪಿ.ಕೊಚ್ಚರ್ ಅವರ ಪುತ್ರಿ ಎಂದು ಗುರುತಿಸಲಾಗಿದೆ.

Latest Indian news

Popular Stories