ರೈತರ ‘ದೆಹಲಿ ಚಲೋ’ ಫೆಬ್ರವರಿ 29ರವರೆಗೆ ಮುಂದೂಡಿಕೆ : ‘ಸಂಯುಕ್ತ ಕಿಸಾನ್ ಮೋರ್ಚಾ’ ಘೋಷಣೆ

ನವದೆಹಲಿ : ಸಂಯುಕ್ತ ಕಿಸಾನ್ ಮೋರ್ಚಾ ತನ್ನ ದೆಹಲಿ ಚಲೋ ಮಾರ್ಚ್’ನ್ನ ಫೆಬ್ರವರಿ 29 ರವರೆಗೆ ಮುಂದೂಡಲು ನಿರ್ಧರಿಸಿದೆ ಎಂದು ರೈತ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಖಾನೇರಿ ಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ರೈತ ಸಂಘಟನೆಯ ಮುಖಂಡ ಸರ್ಬನ್ ಸಿಂಗ್ ಪಂಧೇರ್ ಈ ವಿಷಯ ತಿಳಿಸಿದರು

ಮುಂದಿನ ಕ್ರಮವನ್ನ ಫೆಬ್ರವರಿ 29ರಂದು ನಿರ್ಧರಿಸಲಾಗುವುದು ಎಂದರು.”ನಾವೆಲ್ಲರೂ ದುಃಖಿತರಾಗಿದ್ದೇವೆ, ನಾವು ನಮ್ಮ ಯುವ ರೈತ ಶುಭಕರನ್ ಸಿಂಗ್ ಅವರನ್ನ ಕಳೆದುಕೊಂಡಿದ್ದೇವೆ, ನಾವು ಫೆಬ್ರವರಿ 24 ರಂದು ಅಂದರೆ ನಾಳೆ ನಾವು ಕ್ಯಾಂಡಲ್ ಮಾರ್ಚ್ ನಡೆಸುತ್ತೇವೆ ಎಂದು ನಿರ್ಧರಿಸಿದ್ದೇವೆ” ಎಂದು ಹೇಳಿದರು.

ಫೆಬ್ರವರಿ 26 ರಂದು ಡಬ್ಲ್ಯುಟಿಒ ಸಭೆ ಇದೆ ಮತ್ತು ಫೆಬ್ರವರಿ 25 ರಂದು ನಾವು ಶಂಭು ಮತ್ತು ಖಾನೌರಿ ಎರಡೂ ಸ್ಥಳಗಳಲ್ಲಿ ಡಬ್ಲ್ಯುಟಿಒ ರೈತರ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದರ ಕುರಿತು ಸೆಮಿನಾರ್ಗಳನ್ನು ನಡೆಸುತ್ತೇವೆ ಎಂದು ರೈತ ಮುಖಂಡ ಪಂಧೇರ್ ಹೇಳಿದರು. ಡಬ್ಲ್ಯುಟಿಒದ ಪ್ರತಿಕೃತಿಯನ್ನು ಸುಡುತ್ತೇವೆ. WTO ಮಾತ್ರವಲ್ಲ, ನಾವು ಕಾರ್ಪೊರೇಟ್ ಮತ್ತು ಸರ್ಕಾರದ ಪ್ರತಿಕೃತಿಗಳನ್ನ ಸುಡುತ್ತೇವೆ ಎಂದರು.

Latest Indian news

Popular Stories