ಉಡುಪಿ: ಮಿತಿ ಮೀರಿದ ಆನ್ಲೈನ್ ಫ್ರಾಡ್: ವೃದ್ದರನ್ನು ವಂಚಿಸಿ ಹತ್ತು ಲಕ್ಷ ಲೂಟಿ

ಉಡುಪಿ: ಜಿಲ್ಲೆಯಲ್ಲಿ ಇತ್ತೀಚೆಗೆ ಆನ್ಲೈನ್ ವಂಚನೆ ಪ್ರಕರಣಗಳು ಮಿತಿ ಮೀರುತ್ತಿದ್ದು ವಂಚಕರ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇದೀಗ ಟಿ.ಜೀವನ್ (61)ಇವರು ಉಡುಪಿಯ ಮೈತ್ರಿ ಕಾಂಪ್ಲೇಕ್ಸ್ ನಲ್ಲಿರುವ ಎಸ್.ಬಿ.ಐ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದು. ದಿನಾಂಕ 22/02/2024 ರಂದು ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್  ದಿಂದ  ಕರೆ ಮಾಡಿ ತಾನು  CMPF ಧನ್‌ಭಾಗ್  ಕಚೇರಿಯಿಂದ ಕರೆ ಮಾಡುವುದಾಗಿ ತಿಳಿಸಿ ಬರಬೇಕಾದ ಪೆನ್‌ಶನ್‌ಆರ್ಡರ್ ಮಾಡಿಕೊಡುವುದಾಗಿ ನಂಬಿಸಿ Net Banking ವಿವರ, ATM CARD ವಿವರವನ್ನು ಪಡೆದು ಪಿರ್ಯಾದಿದಾರರ ಹೆಸರಿನಲ್ಲಿ OD ಲೋನ್ ಖಾತೆಯನ್ನು ತೆರೆದು Fixed Deposit ನಲ್ಲಿರುವ ರೂ 10,20,200/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 13/2024 ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.   

ಎರಡು ಲಕ್ಷ ವಂಚನೆ:

ಉಡುಪಿ: ಯಾರೋ ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಂ ಎಪ್ಲಿಕೇಶನ್ ನಲ್ಲಿ ಮಚ್ಚೇಂದ್ರನಾಥ (50) ಇವರನ್ನು ಸಂಪರ್ಕಿಸಿ ಉಧ್ಯೋಗ ಬಗ್ಗೆ ಹೊಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ದಿನಾಂಕ 09/02/2024 ರಂದು ಆರೋಪಿಗಳು ಸೂಚಿಸಿದ ಖಾತೆಗೆ ಹಂತ ಹಂತವಾಗಿ ಒಟ್ಟು ರೂಪಾಯಿ 2,08,463/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿರುತ್ತಾರೆ.

ಆದರೆ, ಆರೋಪಿಗಳು ಲಾಂಭಾಂಶವನ್ನು ನೀಡದೇ ಹಾಗೂ ಪಿರ್ಯಾದಿದಾರರಿಂದ ಪಡೆದ ಹಣವನ್ನು ಹಿಂದುರುಗಿಸದೇ ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2024 ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories