ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ

ರಾಯಚೂರು: ತಾಲೂಕಿನ ಡಿ.ಕರಡಿಗುಡ್ಡ ಗ್ರಾಮದಲ್ಲಿ ರವಿವಾರ ಮೂವರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಜರುಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಮೂವರು ಚಿರತೆ ಬಾಯಿಂದ ತಪ್ಪಿಸಿಕೊಂಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಬೆಳಗ್ಗೆ ರಂಗನಾಥ್ ಬಹಿರ್ದೆಸೆಗೆ ಹೋದಾಗ ಚಿರತೆ ಕಂಡಿದೆ.

ಹೆದರಿಕೊಂಡು ಓಡಿ ಬಂದು ರಮೇಶ್, ಮಲ್ಲಣ್ಣರಿಗೆ ಎನ್ನುವವರಿಗೆ ಮಾಹಿತಿ ನೀಡಿದ್ದಾರೆ. ಅವರು ಚಿರತೆ ಹೆದರಿಸಲು ಆಯುಧ ಹಿಡಿದು ಹೋದಾಗ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಭಾಗದಲ್ಲಿ ಅನೇಕ ದಿನಗಳಿಂದ ಚಿರತೆ ಓಡಾಟದ ಬಗ್ಗೆ ದೂರುಗಳಿದ್ದವು. ಎನ್.ಗಣೆಕಲ್ , ಜಾಲಹಳ್ಳಿ ಸೇರಿ ವಿವಿಧೆ ದನಕರುಗಳ ಮೇಲೆ ಚಿರತೆ ದಾಳಿ ನಡೆಸಿತ್ತು. ಆದರೆ, ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಮಾಡಿದ್ದಾಗಿ ಹೇಳುತ್ತಿದ್ದಾರೆ ವಿನಃ ಈವರೆಗೂ ಸೆರೆ ಹಿಡಿದಿಲ್ಲ. ಈಗ ಜನರ ಮೇಲೆಯೇ ದಾಳಿ ನಡೆಸಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.

Latest Indian news

Popular Stories