ಮನ್ಸಲಾಪುರು ಕ್ರೀಡಾಂಗಣ ಅಭಿವೃದ್ಧಿ ಪಡಿಸಲು ಒತ್ತಾಯಿಸಿ ಪಿಡಿಒಗೆ ಮನವಿ

ರಾಯಚೂರು:ರಾಯಚೂರು ತಾಲೂಕಿನ ಮನ್ಸಲಾಪುರ ಗ್ರಾಮದಲ್ಲಿ ಯುವಕರು ಆಟವಾಡಲು ಕ್ರಿಡಾಂಗಣ ಅಭಿವೃದ್ಧಿ ಪಡಿಸುವಂತೆ ಎ ಐ ಡಿ ವೈ ಒ ಗ್ರಾಮ ಘಟಕದ ನೇತೃತ್ವದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಅನ್ನಪೂರ್ಣ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ನೂರಾರು ಯುವಕರು ಆಟವಾಡಲು ಸ್ಥಳವಿಲ್ಲದೆ ತೊಂದರೆ ಅನುಭವಿಸುತಿದ್ದಾರೆ ಶಾಲಾ ಆವರಣ ಅಥವಾ ಸರ್ಕಾರಿ ಜಾಗವನ್ನು ಗುರುತಿಸಿ ಗ್ರಾಮದ ಯುವಕರು ಆಟವಾಡಲು ಕ್ರೀಡಾಂಗಣ ಅಭಿವೃದ್ಧಿ ಪಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಅಭಿವೃದ್ಧಿ ಅಧಿಕಾರಿಯಾದ ಅನ್ನಪೂರ್ಣ ಅವರು ಮನವಿ ಸ್ವೀಕರಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಬಡ್ಡಿ, ಕೋಕೋ, ವಾಲಿಬಾಲ್ ಸ್ಥಳವನ್ನು ಅಭಿವೃದ್ಧಿಪಡಿಸಲಾಗುವುದು. ಗ್ರಾಮದ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಜಾಗವನ್ನು ಗುರುತಿಸಿ ಪಂಚಾಯಿತಿ ಸಭೆಯಲ್ಲಿ ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಗುವುದೆಂದು ಹೇಳಿದರು.
ಎ ಐ ಡಿ ವೈ ಓ ಜಿಲ್ಲಾ ಅಧ್ಯಕ್ಷರಾದ ಚನ್ನಬಸವ ಜಾನೇಕಲ್, ಗ್ರಾಮ ಘಟಕದ ಅಧ್ಯಕ್ಷ ಕೃಷ್ಣ ನಾಯಕ, ಕಾರ್ಯದರ್ಶಿ ಸಂತೋಷ್ ಸಾಗರ್, ನರಸಿಂಹ ಎಂ. ಜಿ, ಉಪಾಧ್ಯಕ್ಷ ಶಿವರಾಜ್, ತಿಮ್ಮಾರೆಡ್ಡಿ, ಶಿವಪುತ್ರ ಹಿರೇಮಠ್, ಸಂದೀಪ್, ಮಹೇಶ್, ರವಿ, ರಮೇಶ್, ಸತೀಶ್, ಮಂಜುನಾಥ್ ಎಚ್, ವೀರೇಶ್, ಅನಿಲ್ ಕುಮಾರ್, ಯಂಕಪ್ಪ, ಮಂಜುನಾಥ್, ಅನಿಲ್ ಮುಂತಾದ ಗ್ರಾಮದ ಯುವಕರು ಭಾಗವಹಿಸಿದ್ದರು.

Latest Indian news

Popular Stories