ಲೋಕಾಯುಕ್ತ ಎಸ್ ಪಿ ಶಶಿಧರ ಅಧ್ಯಕ್ಷತೆಯಲ್ಲಿ ಅಹವಾಲು ಸ್ವೀಕಾರ

ರಾಯಚೂರು: ನಗರದ ತಹಶೀಲ್ದಾರರ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ ಮಾಡಲಾಯಿತು.

ನಗರದ ವಾರ್ಡ್ ನಂಬರ್ 12ರ ಮಹಮ್ಮದ್ ನಗರ ನಿವಾಸಿ ಸೈಯದ್ ಜಾಕೀರ್ ದೂರು ಸಲ್ಲಿಸಿ ಮನೆಗೆ ನಳ ಸಂಪರ್ಕ ನೀಡಲು ನಗರಸಭೆಗೆ ಅರ್ಜಿ ಸಲ್ಲಿಸಿ 5 ತಿಂಗಳಾದರೂ ಚುನಾವಣೆಯ ನೀತಿ ಸಂಹಿತೆಯ ಹೆಸರಿನಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಬಗ್ಗೆ ಮಾಹಿತಿ ನೀಡಲು ಪೌರಾಯುಕ್ತರು ಸಭೆಗೆ ಆಗಮಿಸದೇ ಇರುವುದರಿಂದ ಅಧಿಕಾರಿಗಳಿಗೆ ಲೋಕಾಯುಕ್ತ ಎಸ್ ಪಿ ಎಂ.ಎನ್ ಅಧಿಕಾರಿ ಶಶಿಧರ್ ಸೂಚನೆ ನೀಡಿದರು.

ದೇವದುರ್ಗ ತಾಲ್ಲೂಕಿನ ವಾಲ್ಮೀಕಿ ಭವನ ನಿರ್ಮಾಣಕ್ಕೆ ಎಂಜಿನಿಯರ್ ಒಬ್ಬರು 2018ರಲ್ಲಿ ₹6.35 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದಾರೆ. ಬಾಕಿ ಇರುವಾಗಲೇ 2019ರಲ್ಲಿ ಕೆಆರ್‌ಡಿಎಲ್‌ಗೆ ವಹಿಸಿದೆ. ಮೂರನೇ ವ್ಯಕ್ತಿ ಕಾಮಗಾರಿ ಮಾಡಿದ್ದು, ಬಿಲ್ ಪಾವತಿ ಮಾಡಿಲ್ಲ ಎಂದು ದೂರು ನೀಡಿದರು.

ತಾಲ್ಲೂಕಿನ ಗಡಿ ಭಾಗದ ತುಂಗಭದ್ರಾ ಗ್ರಾಮದ ನಿವಾಸಿ ಡೇವಿಡ್ ಸರ್ವೇ ನಂಬರ್ 106/6/3 ರ 2 .1 ಎಕರೆ ಭೂಮಿ ದೌರ್ಜನ್ಯದಿಂದ 4 ಜನರು ಒತ್ತುವರಿ ಮಾಡಿಕೊಂಡಿದ್ದು ಪಟ್ಟಾದರಿಗೆ ನೀಡಲು ಮನವಿ ಮಾಡಿದರು.

ಯಕ್ಲಾಸಪೂರ ಗ್ರಾಮದ ನಿವಾಸಿ ಈಶ್ವರ ಅವರು 371 ಜೆ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಅನೇಕ ದಿನಗಳಾದರೂ ವಿಲೇವಾರಿ ಮಾಡುತ್ತಿಲ್ಲ ಇದರಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿಳಂಭವಾಗುತ್ತಿದೆ ಎಂದರು.

ನಗರ ನಿವಾಸಿ ಭಾಗ್ಯಮ್ಮ ಅವರ ಪತಿ ಕಳೆದ 1 ವರ್ಷದ ಹಿಂದೆ ನಿಧನರಾಗಿದ್ದು, ವಿಧವಾ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೆ ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಇಲ್ಲ. ಕೂಡಲೇ ವಿಧವಾ ವೇತನ ಅರ್ಜಿ ಪಡೆಯಲು ಗ್ರೇಡ್ 2 ತಹಶಿಲ್ದಾರ್ ಅವರಿಗೆ ತಿಳಿಸಿದರು.

ಈ ವೇಳೆ ಇನ್ಸೆಕ್ಟರ್ ಕಾಳಪ್ಪ, ಅಮರೇಶ ಹುಬ್ಬಳ್ಳಿ, ಗ್ರೇಡ್ 2 ತಹಶಿಲ್ದಾರ್ ಸೈಯದ್ ಮೀರ್ ಅನ್ವರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Latest Indian news

Popular Stories