ರಾಂಪೂರ ಕೆರೆಗೆ ಶಾಸಕ ಭೇಟಿ; ಗಣೇಕಲ್ ಜಲಾಶಯದಿಂದ ನೀರು ಪೂರೈಕೆ

ರಾಯಚೂರು: ನಗರದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಗಣೇಕಲ್ ಜಲಾಶಯದಿಂದ ರಾಂಪೂರ ಕೆರೆಗೆ ನೀರು ಹರಿಸಿದ್ದು, ಸಾರ್ವಜನಿಕರು ನಳಗಳಲ್ಲಿ ಬರುವ ನೀರನ್ನು ಕಾಯಿಸಿ ಕುಡಿಯಬೇಕು ಎಂದು ಶಾಸಕ ಡಾ.ಶಿವರಾಜ ಪಾಟೀಲ ತಿಳಿಸಿದರು.

ನಗರದ ರಾಂಪೂರು ಕೆರೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಗಣೇಕಲ್ ಜಲಾಶಯದಿಂದ ಕುಡಿಯುವ ನೀರಿಗಾಗಿ ರಾಂಪೂರ ಕೆರೆಗೆ ನಿರು ಹರಿಸಲಾಗುತ್ತಿದೆ. ಕೆರೆ ತುಂಬಿಸುವ ಕಾರ್ಯ ನಡೆದಿದೆ. ರಾಂಪುರ ಅವಲಂಬಿತ ವಾರ್ಡ್ ಗಳ ನಿವಾಸಿಗಳು ನಲ್ಲಿಗೆ ಬಿಟ್ಟ ನೀರು ನೇರವಾಗಿ ಕುಡಿಯದೇ ಕುದಿಸಿ ಕುಡಿಯಬೇಕು. ಅಧಿಕಾರಿಗಳು ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕಾರ್ಯಪ್ರವೃತ್ತರಾಗಬೇಕು. ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ನಗರಸಭೆಯ ಅಧಿಕಾರಿಗಳು, ಮುಖಂಡರು ಇದ್ದರು.

Latest Indian news

Popular Stories