ರಾಯಚೂರು | ಜಿಲ್ಲೆಯಲ್ಲಿ ಕೆಲವೆಡೆ ಸಾಧಾರಣ,ಭಾರಿ ಮಳೆ ರಸ್ತೆ ಸಂಪರ್ಕ ಕಡಿತ

ರಾಯಚೂರು: ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಬೆಳಗಿನ ಜಾವದ ವರೆಗೆ ಸುರಿದ ಸಾಧಾರಣ ಮಳೆಯಿಂದಾಗಿ ನಗರ ತಂಪಾದರೆ, ಗ್ರಾಮೀಣ ಭಾಗದ ಕೆಲವೆಡೆ ರಸ್ತೆ ಸಂಪರ್ಕ ಕಡಿತವಾಗಿ ಸಮಸ್ಯೆಯಾಯಿತು.

ರಾಯಚೂರಿನ ತಾಲ್ಲೂಕಿನ ಬಿಚ್ಚಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಯದ್ಲಾಪುರು ಗ್ರಾಮದಲ್ಲಿ ವರುಣನ ಆರ್ಭಟಕ್ಕೆ ರಸ್ತೆ ಕೊಚ್ಚಿಹೋಗಿದೆ. ಇದರ‌ ಪರಿಣಾಮ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸಬೇಕಾಯಿತು.

ಮಳೆಯಿಂದಾಗಿ ನಗರದ ಎಲ್ ಬಿಎಸ್ ನಗರ, ಸಿಯತಲಾಬ್, ನೀರಭಾವಿ ಕುಂಟಾ ಸೇರಿದಂತೆ ಹಲವೆಡೆ ರಸ್ತೆಯ ಮೇಲೆ ನೀರು ನಿಂತು ರಸ್ತೆ ಕೊಚ್ಚೆಯಾಗಿ ಮಾರ್ಪಟ್ಟಿತು. ಇದರಿಂದ ಸಾರ್ವಜನಿಕರಿಗೆ ನಡೆದಾಡಲು ಸಮಸ್ಯೆಯಾಯಿತು.

ರಾಷ್ಟ್ರೀಯ ಹೆದ್ದಾರಿಯ ಸೈಯದ್ ಶಮ್ಸ್ ಆಲಂ ಹುಸೇನಿ ದರ್ಗಾ ಮುಂಭಾಗ ಕಾಟನ್ ಮಾರ್ಕೆಟ್ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ವಾಹನ ಸಂಚಾರಕ್ಕೆ ತೊಂದರೆ ಆಯಿತು. ರಸ್ತೆ ಮಧ್ಯೆ ಅಪಾರ ಪ್ರಮಾಣದಲ್ಲಿ ತಗ್ಗುಗುಂಡಿಗಳು ನಿರ್ಮಾಣವಾಗಿರುವ ಕಾರಣ ವಾಹನಗಳು ಬಹಳ ಹೊತ್ತಿನವರೆಗೂ ಸರತಿ ಸಾಲಿನಲ್ಲಿ ನಿಂತಿದ್ದವು. ಕೆಲವು ವಾಹನ ಚಾಲಕರು ಅಪಾಯ ಲೆಕ್ಕಿಸದೇ ವಾಹನಗಳನ್ನು ಚಾಲನೆ ಮುಂದೆ ಸಾಗಿದರು.

Latest Indian news

Popular Stories