ಸಂಸದ ಡಿಕೆ ಸುರೇಶಗೆ ಮೊದಲು ನೋಟಿಸ್ ಕೊಡಲಿ : ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆಗ್ರಹ

ಶಿವಮೊಗ್ಗ : ರಾಷ್ಟ್ರ ದ್ರೋಹಿಗಳು ಹಾಗೂ ದೇಶ ವಿಭಜನೆ ಹೇಳಿಕೆ ನೀಡುವಂತಹವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಹೇಳಿಕೆ ನೀಡಿರುವ ಬಿಜೆಪಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ಇಂದು ದಾವಣಗೆರೆಯ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು ಮೊದಲು ಸಂಸದ ಡಿಕೆ ಸುರೇಶ್ ಗೆ ನೋಟಿಸ್ ಜಾರಿ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ನೋಟಿಸಿ ಕೊಟ್ಟಿದ್ದಕ್ಕೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ದು, ದೇಶದ್ರೋಹಿ ಹೇಳಿಕೆ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ದೇಶದ್ರೋಹಿ ಹೇಳಿಕೆ ಕೊಡುವವರ ಮೇಲೆ ಕೇಸ್ ಹಾಕಿಲ್ಲ ಆದರೆ ನನ್ನ ಮೇಲೆ ಕೇಸ್ ಹಾಕಿದ್ದಾರೆ ಎಂದು ಈಶ್ವರಪ್ಪ ಕೆಂಡಕಾರಿದ್ದಾರೆ.

ಇಡೀ ಸರ್ಕಾರ ಡಿ.ಕೆ ಸುರೇಶ್ ಹೇಳಿಕೆಯನ್ನು ಸಮರ್ಥಿಸಿದೆ. ರಾಷ್ಟ್ರ ದ್ರೋಹಿಗಳನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು. ಗುಂಡಕ್ಕಿ ಕೊಲ್ಲುವ ಕಾನೂನು ತರಬೇಕೆಂದು ನನ್ನ ಮನವಿ. ಇಂತಹ ಕಾನೂನು ತರಲು ನಾನು ಪ್ರಧಾನಿ ಮೋದಿಗೆ ಮನವಿ ಮಾಡಿದ್ದೇನೆ.ಸಂಸದ ಡಿಕೆ ಸುರೇಶ್ ಗೆ ಮೊದಲು ನೋಟಿಸ್ ಕೊಡಲಿ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.

Latest Indian news

Popular Stories