ಇನ್ಮುಂದೆ ಮೊಗವೀರ ಸಮುದಾಯದ ವಿದ್ಯಾರ್ಥಿಗಳಿಗೆ 25,000 ಸಹಾಯ ಧನ: ಜಯ ಸಿ ಕೋಟ್ಯಾನ್ ಘೋಷಣೆ

ಶಿವಮೊಗ್ಗ: ಮೊಗವೀರ ಸಮುದಾಯದ ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ಇನ್ಮುಂದೆ ಪ್ರತಿ ವರ್ಷ 25,000 ಸಹಾಯ ಧನ ನೀಡಲಾಗುವುದು ಅಂತ ದಕ್ಷಿಣ ಕನ್ನಡ ಜಿಲ್ಲೆಯ ಮೋಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಹೇಳಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಮೊಗವೀರ ಮಹಾಜನ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಮೊಗವೀರ ಸಮುದಾಯದ ವಿದ್ಯಾರ್ಥಿಗಳ ಸಾಧನೆ ಕಂಡು ಸಂತಸವಾಗಿದೆ.

ಇದೇ ಸಂದರ್ಭದಲ್ಲಿ ಇನ್ಮುಂದೆ ಮೊಗವೀರ ಸಮುದಾಯದ ಎಂಜಿನಿಯರಿಂಗ್, ಮೆಡಿಕಲ್ ವ್ಯಾಸಂಗಕ್ಕೆ ಸೇರುವಂತ ಓರ್ವ ಉತ್ತಮ ಅಂಕ ಪಡೆದಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ರೂ.25,000 ಸಹಾಯ ದಿನ ನೀಡಲಾಗುವುದು ಎಂಬುದಾಗಿ ಘೋಷಿಸಿದರು.

ಮೊಗವೀರ ಸಮಾಜದ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಬೇಕು. ಸಮುದಾಯದಕ್ಕೆ ಕೀರ್ತಿ ತರುವಂತ ಕೆಲಸ ಮಾಡಬೇಕು. ಈ ಕೆಲಸ ಮುಂದೆ ಆಗಲಿ. ಸಾಗರ ತಾಲೂಕು ಮೊಗವೀರ ಮಹಾಸಭ ಮತ್ತಷ್ಟು ಜನಪರ ಕೆಲಸ ಮಾಡುವಂತೆ ಆಗಲಿ ಎಂದರು.

ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಂತ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು ಸಂತಸದ ಸಂಗತಿಯಾಗಿದೆ. ಇಂತಹ ಕಾಯರ್ಯಕ್ರಮದಲ್ಲಿ ಭಾಗಿಯೋಗುವುದು ಹೆಮ್ಮೆಯ ವಿಚಾರವಾಗಿದೆ. ಮೊಗವೀರ ಸಮಾಜ ಮತ್ತಷ್ಟು ಉತ್ತಮ ಕಾರ್ಯಗಳನ್ನು ಮಾಡಲಿ ಅಂತ ಆಶಿಸಿದರು.

ಉಡುಪಿಯ ಮೊಗವೀರ ಯುವ ಸಂಘಟನೆಯ ಜಯಂತ್ ಅಮೀನ್ ಕೊಡಿ ಅವರು ಮಾತನಾಡಿ ಸಮುದಾಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು. ಮೊಗವೀರ ಸಮುದಾಯದ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಬೇಕು. ಉತ್ತಮ ಸಾಧನೆಯ ಮೂಲಕ ಸಮಾಜಕ್ಕೆ, ಪೋಷಕರಿಗೆ ಹೆಸರು ತರುವಂತ ಕೆಲಸ ಮಾಡಲಿ ಎಂದರು.

Latest Indian news

Popular Stories