ತುಂಗಭದ್ರಾ ನದಿಗೆ ಭದ್ರಾ ಡ್ಯಾಂನಿಂದ 9 ದಿನ ನೀರು ಬಿಡುಗಡೆ

ಶಿವಮೊಗ್ಗ, ಮಾರ್ಚ್ 27: ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಧೀಕ್ಷಕ ಇಂಜಿನಿಯರ್ ಕಚೇರಿ ಭದ್ರಾ ಯೋಜನಾ ವೃತ್ತ ಭದ್ರಾ ನದಿ ಮೂಲಕ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ನದಿಗೆ ನೀರು ಹರಿಸಲು ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ.

ಸದಸ್ಯ ಕಾರ್ಯದರ್ಶಿಗಳು, ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಹಾಗೂ ಅಧೀಕ್ಷಕ ಅಭಿಯಂತರರು, ಭದ್ರಾ ಯೋಜನಾ ವೃತ್ತ, ಬಿ.ಆರ್. ಪ್ರಾಜೆಕ್ಟ್ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಈ ಆದೇಶ ಭದ್ರಾ ಜಲಾಶಯದಿಂದ ಬೃಹತ್/ ಮಧ್ಯಮ ನೀರಾವರಿ ಜಲಾಶಯಗಳಲ್ಲಿರುವ ನೀರನ್ನು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವವಿರುವುದರಿಂದ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ನದಿಯ ಮೂಲಕ ನೀರು ಹರಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಪ್ರಾದೇಶಿಕ ಆಯುಕ್ತರು, ಮೈಸೂರು, ವಿಭಾಗ ಮೈಸೂರು ಇವರ ಅಧ್ಯಕ್ಷತೆಯಲ್ಲಿ ದಿನಾಂಕ 21/3/2024ರಂದು ನಡೆದ ಕುಡಿಯುವ ನೀರಿನ ಸಭೆಯ ನಡವಳಿಗಳು ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ.

2023-24 ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ಬೃಹತ್/ ಮಧ್ಯಮ ನೀರಾವರಿ ಜಲಾಶಯಗಳಲ್ಲಿರುವ ನೀರನ್ನು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವವಿರುವುದರಿಂದ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ನದಿಯ ಮೂಲಕ ದಿನಾಂಕ 29/03/2024 ರಿಂದ 06/04/2024ರವರೆಗೆ ನೀರನ್ನು ನದಿಗೆ ಹರಿಸಲಾಗುತ್ತದೆ ಎಂದು ಹೇಳಿದೆ.ಎಷ್ಟು ನೀರು ಹರಿಸಲಾಗುತ್ತದೆ?; ಮಾರ್ಚ್ 29ರ ರಾತ್ರಿಯಿಂದ ಏಪ್ರಿಲ್ 6ರ ರಾತ್ರಿಯ ತನಕ 23,200 ಕ್ಯೂಸೆಕ್ ನೀರು (2.00 ಟಿಎಂಸಿ) ನೀರನ್ನು ಹರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.ಈ

Latest Indian news

Popular Stories