ಹೊಸ ಪಠ್ಯಕ್ರಮದ ಪಠ್ಯ ಆಗಮನ : ಶಾಲೆಗಳಿಗೆ ಪಠ್ಯಪುಸ್ತಕಗಳ ವಿತರಣೆ | ವಿಶೇಷ ವರದಿ

ಕಾರವಾರ: ಪಠ್ಯ ಪುಸ್ತಕ ರಚನಾ ಸಮಿತಿ ನೇಮಕದ‌ ಶಿಫಾರಸ್ಸುಗಳ ಅನ್ವಯ ಪೊಸ‌ಪಠ್ಯ ಮುದ್ರಣವಾಗುತ್ತಿದ್ದು, ಶೇ. 30 ರಷ್ಟು ಪಠ್ಯಗಳು ಉತ್ತರ ಕನ್ನಡ ಜಿಲ್ಲೆಯನ್ನು ತಲುಪಿವೆ. ಮೇ.25 ರ ಹೊತ್ತಿಗೆ ಪೂರ್ಣಪ್ರಮಾಣದ ಪಠ್ಯ ಜಿಲ್ಲೆಯ ಎಲ್ಲಾ ಬಿಇಒ ಕಚೇರಿ ತಲುಪಲಿವೆ.

IMG 20240519 WA0033 Special Stories

ಕಾರವಾರ ತಾಲೂಕಿಗೆ ಶೇ.27,ಶಿರಸಿ ಶೈಕ್ಷಣಿಕ ಜಿಲ್ಲೆಗೆ ಶೇ‌ .38 ರಷ್ಟು, ಕಾರವಾರ ಶೈಕ್ಷಣಿಕ ಜಿಲ್ಲೆಗೆ ಶೇ. 30 ರಷ್ಟು ಪಠ್ಯ ಈಗಾಗಲೇ ತಲುಪಿವೆ. ಕಾರವಾರ ತಾಲೂಕಿನಲ್ಲಿ ಕೆಲ ಶಾಲೆಗಳಿಗೆ ಪಠ್ಯ ವಿತರಣೆ ಸಹ ಆಗಿದೆ. 1 ನೇ ತರಗತಿಯಿಂದ 10 ನೇ ತರಗತಿವರೆಗೆ ಪಠ್ಯದ ವಿವಿಧ ವಿಷಯಗಳ ಪಠ್ಯ ಬೆಂಗಳೂರು ನಿಂದ ಕಾರವಾರ, ಶಿರಸಿ ತಲುಪಿವೆ. ಪ್ರತಿ ತಾಲೂಕಿನ ಬಿಇಒ ಕಚೇರಿಯಲ್ಲಿ ಪುಸ್ತಕ ಸಂಗ್ರಹಣ ಗೋಡಾನ್ ಇದ್ದು, ಅಲ್ಲಿ ಸುರಕ್ಷಿತವಾಗಿ ಪಠ್ಯ ಸಂಗ್ರಹಿಸಲಾಗಿದೆ. ಖಾಸಗಿ ಮತ್ತು ಅನುದಾನಿತ ಶಾಲೆಗಳು ಪಠ್ಯಗಳನ್ನು ಶುಲ್ಕ ತುಂಬಿ ಪಡೆದರೆ,‌ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಪಠ್ಯ ವಿತರಣೆಯಾಗಲಿದೆ. ಎಲ್ಲಾ ಬಿಇಒ ಗಳ ಮುಖಾಂತರ ಶಾಲಾ ಮುಖ್ಯೋಪಾಧ್ಯಾಯರಿಗೆ ಪಠ್ಯ ವಿತರಣೆಗೆ ಸೂಚನೆ ಹೋಗಿದ್ದು, ಮೇ. 29 ಶಾಲಾ ಪ್ರಾರಂಭದ ದಿನಕ್ಕಿಂತ ಮುಂಚಿತವಾಗಿ ಪಠ್ಯಗಳು, ವರ್ಕ ಬುಕ್ ,ಮಕ್ಕಳ ದಿನಚರಿ ಪುಸ್ತಕಗಳು, ಡೈರಿ ಸಹ ಶಾಲೆಗಳನ್ನು ತಲುಪಿವೆ. ಕರೋನಾ ಸಂದರ್ಭದಲ್ಲಿ ನಿಂತು ಹೋಗಿದ್ದ ಮಕ್ಕಳ ಡೈರಿ ಮತ್ತು ವರ್ಕಬುಕ್ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾರಂಭವಾಗಿದೆ. ಇದನ್ನು ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಜಾರಿಯಲ್ಲಿದ್ದ ಯೋಜನೆಯಾಗಿತ್ತು.‌ ಬಿಜೆಪಿ ಸರ್ಕಾರ ಆಡಳಿತ ನಡೆಸುವಾಗ ಇತಿಹಾಸ ತಿರುಚಿದ ಪಾಠಗಳನ್ನು ಸೇರಿಸಲಾಗಿತ್ತು. ಬಸವಣ್ಣ ಅವರ ಇತಿಹಾಸ ತಿರುಚಲಾಗಿತ್ತು. ನಾರಾಯಣ ಗುರು, ದೇವನೂರು ಮಹಾದೇವ ಸೇರಿದಂತೆ ಪ್ರಗತಿಪರ ಮತ್ತು ಮಾನವೀಯತೆ ಪಾಠಗಳನ್ನು ಕೈ ಬಿಡಲಾಗಿತ್ತು. ರೋಹಿತ್ ಚಕ್ರತೀರ್ಥ ಮಾಡಿದ ಅದ್ವಾನಗಳನ್ನು ಈಗ ಸರಿಪಡಿಸಿ,ಕರ್ನಾಟಕದ ಪರಂಪರೆಯನ್ನು ಮತ್ತೆ ಎತ್ತಿ ಹಿಡಿಯಲಾಗಿದೆ.
ಶಾಲಾ‌ಪಠ್ಯ ಪುಸ್ತಕ ಪರಿಷ್ಕರಣೆ ಪೂರ್ಣವಾಗಿದ್ದು ಡಾ. ಎಂ.ಜಿ. ಹೆಗಡೆ ಹಾಗೂ ಅವರ ತಂಡದ ಶಿಫಾರಸ್ಸನಂತೆ ಹೊಸ ಪಠ್ಯ ಪುಸ್ತಕ ಜೂನ್ ಒಂದಕ್ಕೆ ಮಕ್ಕಳ ಕೈ ಸೇರಲಿವೆ.

ಪಠ್ಯ ಪುಸ್ತಕ ಸರಬರಾಜು ನಿತ್ಯವೂ ಡಿಡಿಪಿಐ ಕಚೇರಿಗೆ ಬರುತ್ತಲೇ ಇದೆ. ಪುಸ್ತಕ ಮುದ್ರಣ ಮತ್ತು ಸರಬರಾಜು ಗುತ್ತಿಗೆದಾರರು ಅವಧಿಗೆ ಸರಿಯಾಗಿ ಪಠ್ಯಪುಸ್ತಕ ತಲುಪಿಸುತ್ತಿದ್ದಾರೆಂದು ಡಿಡಿಪಿಐ ಕಚೇರಿಯ ಪಠ್ಯ ಪುಸ್ತಕ ನುಡಲ್ ಆಫೀಸರ್ ( ನಿರ್ವಹಣೆ ಅಧಿಕಾರಿ) ನಧಾಪ್ ಏಜಾಜ್ ಅಹಮ್ಮದ್ ಪತ್ರಿಕೆಗೆ ತಿಳಿಸಿದರು.
ಈ ಸಲ ಪಠ್ಯ ಮುದ್ರಣದಲ್ಲಿ ವಿಳಂಬ ಆಗುತ್ತಿತ್ತು. ಮಧು ಬಂಗಾರಪ್ಪ ಶಿಕ್ಷಣ ಸಚಿವರಾದ‌ ಮೇಲೆ ಶಿಕ್ಷಣ ಇಲಾಖೆಯ ಕೆಲಸ ಕಾರ್ಯಗಳು ಚುರುಕಾಗಿವೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಹಾಗೂ ಚುರುಕುತನ ಕಾಣುತ್ತಿದೆ ಎಂದು ಶಾಲಾ ಪೋಷಕರಾದ ರಾಜೇಂದ್ರ ಗುನಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿರಸಿ ಶೈಕ್ಷಣಿಕ ಜಿಲ್ಲೆಗೆ ಪಠ್ಯಗಳು ಈಗಾಗಲೇ ತಲುಪಿವೆ. ಕೆಲ ಪಠ್ಯಗಳು ಬರುತ್ತಿವೆ. ಮೇ.25 ರಿಂದ ಪಠ್ಯ ಪುಸ್ತಕ ಶಾಲೆಗಳಿಗೆ ತಲುಪಲಿವೆ ಎಂದು ಶಿರಸಿ ಡಿಡಿಪಿಐ ಬಸವರಾಜ್ ಹೇಳಿದರು.

ಕಾರವಾರ ತಾಲೂಕಿಗೆ ಪಠ್ಯ ಈಗಾಗಲೇ ಶೇ.‌27 ರಷ್ಟು ತಲುಪಿವೆ. ದಿನವೂ ಒಂದೊಂದು ವಿಷಯದ ಪಠ್ಯ ಬರುತ್ತಲಿವೆ. ಎಸ್. ಎಸ್ .ಎಲ್. ಸಿ .ಪೇಲಾದ ಮಕ್ಕಳಿಗೆ ಬ್ರಿಜ್ ಕೋರ್ಸ ನಡೆಯುತ್ತಿತ್ತು .‌ ಇದು ಮತ್ತೆ ಜೂ.1 ರಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಪಾಠಗಳು ನಡೆಯಲಿವೆ .

ಜೂ 14 ರಿಂದ ಪರೀಕ್ಷೆ ಪ್ರಾರಂಭ ವಾಗಲಿದೆ. ಇದರ ನಡುವೆಯೂ ಪಠ್ಯ ಪುಸ್ತಕ ಶಾಲೆಗೆ ತಲುಪಿಸಲು ಪ್ರತ್ಯೇಕ ಸಿಬ್ಬಂದಿ ಇದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡುತ್ತೇವೆ ಕಾರವಾರ ಬಿ.ಇ.ಓ. ಚಂದ್ರಹಾಸ ರಾಯ್ಕರ್ ಹೇಳಿದರು.
…..

Latest Indian news

Popular Stories