ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಐದು ಚಿನ್ನದ ಪದಕ ಗೆದ್ದ ನಟ ಮಾಧವನ್ ಪುತ್ರ

ಮುಂಬೈ: ಚಿತ್ರ ತಾರೆಯರ ಮಕ್ಕಳು ಸಾಮಾನ್ಯವಾಗಿ ಹೀರೋ ಅಥವಾ ಹೀರೋಯಿನ್ ಗಳಾಗಬೇಕು ಎಂಬ ಕನಸು ಕಾಣುತ್ತಾರೆ. ಈ ನಿಟ್ಟಿನಲ್ಲಿ ಪ್ರಯತ್ನ ಕೂಡ ನಡೆಸುತ್ತಾರೆ. ಕೆಲವರು ಗೆದ್ದರೆ ಇನ್ನು ಕೆಲವರು ಸೋಲು ಅನುಭವಿಸುತ್ತಾರೆ. ಇದು ಸಾಮಾನ್ಯ ವಿಷಯ.

ಹೀಗಿರುವಾಗ ನಟ ಆರ್ ಮಾಧವನ್ ಪುತ್ರ ವೇದಾಂತ್ ಇವರಲ್ಲಿ ಭಿನ್ನರಾಗಿ ಗುರುತಿಸಿಕೊಂಡಿದ್ದಾರೆ. ಅತ್ಯುತ್ತಮ ಈಜು ಪಟುವಾಗಿ ಹೊರಹೊಮ್ಮಿದ್ದಾರೆ. ಇದೀಗ ಖೇಲೋ ಇಂಡಿಯಾ ಯಂಗ್ ಸ್ಪರ್ಧೆಯಲ್ಲಿ ಆರ್ ಮಾಧವನ್ ಪುತ್ರ ವೇದಾಂತ್ ಐದು ಚಿನ್ನ, ಎರಡು ಬೆಳ್ಳಿ ಪದಕ ಪಡೆದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಮಾಧವನ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ಪುತ್ರನಿಗೆ ಶುಭ ಹಾರೈಸಿದ್ದಾರೆ.

ಮಗನಿಗೆ ಅತ್ಯುತ್ತಮ ತರಬೇತಿ ನೀಡುವ ಸಲುವಾಗಿ ಮಾಧವನ್ ಕುಟುಂಬ ಸಮೇತ ದುಬೈಗೆ ಶಿಫ್ಟ್ ಆಗಿದ್ದರು.

Latest Indian news

Popular Stories