ನಮೀಬಿಯಾ ವಿರುದ್ಧ ಗೆದ್ದ ಪಾಕ್: ಟಿ – 20 ಸೆಮಿಫೈನಲ್ಸ್’ಗೆ ಲಗ್ಗೆ

ಅಬುಧಾಬಿ: ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭರ್ಜರಿಯಾಗಿ ಸೆಮೀಸ್ ಗೆ ಲಗ್ಗೆ ಇಟ್ಟಿದೆ.

ಟೂರ್ನಿಯ ಎರಡನೇ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ನಮೀಬಿಯಾ ವಿರುದ್ಧ 45ರನ್ ಗಳ ಭರ್ಜರಿ ಗೆಲುವು ಸಾಧಿಸಿದ್ದು, ಇದು ಪಾಕಿಸ್ತಾನಕ್ಕೆ ಸತತ ನಾಲ್ಕನೇ ಗೆಲುವಾಗಿದೆ. ಆ ಮೂಲಕ ಪಾಕಿಸ್ತಾನ 8 ಅಂಕಗಳೊಂದಿಗೆ ಭರ್ಜರಿಯಾಗಿ ಸೆಮೀಸ್ ಗೆ ಲಗ್ಗೆ ಇಟ್ಟಿದೆ.

ಪಾಕಿಸ್ತಾನ ನೀಡಿದ 190ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನಮೀಬಿಯಾ ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು 144 ರನ್‌ ಗಳನ್ನೇಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 45ರನ್‌ ಗಳ ಅಂತರದಲ್ಲಿ ಸೋಲು ಕಂಡಿತು.

ಕ್ರೇಗ್‌ ವಿಲಿಯಮ್ಸ್‌ (40), ಡೇವಿಡ್‌ ವೀಸ್‌ (ಅಜೇಯ 43) ಮತ್ತು ಸ್ಟೇಫನ್‌ ಬ್ರಾಡ್‌ (29) ಪಾಕ್‌ ಬೌಲರ್‌ಗಳೆದುರು ದಿಟ್ಟ ಆಟವಾಡಿದರು. ಪಾಕ್‌ ಪರ ಹಸನ್‌ ಅಲಿ, ಇಮದ್‌ ವಾಸಿಂ, ಹ್ಯಾರಿಸ್‌ ರೌಫ್‌ ಮತ್ತು ಶಾಬದ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡರು. ಮಹಮದ್ ರಿಜ್ವಾನ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Latest Indian news

Popular Stories

error: Content is protected !!