ಬಾಂಗ್ಲಾದೇಶದ ಎದುರು ಚಡಪಡಿಸಿ ಗೆದ್ದ ಪಾಕ್

ಢಾಕಾ: ಆತಿಥೇಯ ಬಾಂಗ್ಲಾದೇಶದ ಸಣ್ಣ ಮೊತ್ತವನ್ನು ಹಿಂದಿಕ್ಕಲು ಚಡಪಡಿಸಿದ ಪಾಕಿಸ್ಥಾನ, ಮೊದಲ ಟಿ20 ಪಂದ್ಯವನ್ನು 4 ವಿಕೆಟ್‌ಗಳಿಂದ ಜಯಿಸಿ ಮುನ್ನಡೆ ಕಂಡಿದೆ.

ಶೇರ್‌ ಎ ಬಾಂಗ್ಲಾ ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಲು ನಿರ್ಧರಿಸಿದ ಬಾಂಗ್ಲಾದೇಶಕ್ಕೆ ಗಳಿಸಲು ಸಾಧ್ಯವಾದದ್ದು 7ಕ್ಕೆ 127 ರನ್‌ ಮಾತ್ರ. ಇದನ್ನು ಬೆನ್ನಟ್ಟುವ ಹಾದಿಯ ಕೊನೆಯಲ್ಲಿ ಪಾಕ್‌ ತೀವ್ರ ಒತ್ತಡಕ್ಕೆ ಸಿಲುಕಿತು. 3 ಓವರ್‌ಗಳಿಂದ 32 ರನ್‌ ತೆಗೆಯುವ ಸವಾಲು ಎದುರಾಯಿತು. 4 ವಿಕೆಟ್‌ಗಳಷ್ಟೇ ಉಳಿದಿತ್ತು. ಆದರೆ ಶದಾಬ್‌ ಖಾನ್‌-ಮೊಹಮ್ಮದ್‌ ನವಾಜ್‌ ಸಾಹಸದಿಂದ 19.2 ಓವರ್‌ಗಳಲ್ಲಿ 6 ವಿಕೆಟಿಗೆ 132 ರನ್‌ ಮಾಡಿ ಗುರಿ ಮುಟ್ಟಿತು.

ಶದಾಬ್‌-ನವಾಜ್‌ ಮುರಿಯದ 7ನೇ ವಿಕೆಟಿಗೆ 2.3 ಓವರ್‌ಗಳಿಂದ 32 ರನ್‌ ಚಚ್ಚಿ ಬಾಂಗ್ಲಾ ಕೈಯಿಂದ ಗೆಲುವನ್ನು ಕಸಿದರು.

ಶದಾಬ್‌ 10 ಎಸೆತಗಳಿಂದ 21 ರನ್‌, ನವಾಜ್‌ 8 ಎಸೆತಗಳಿಂದ 18 ರನ್‌ ಬಾರಿಸಿದರು. ಇಬ್ಬರೂ 2 ಸಿಕ್ಸರ್‌, ಒಂದು ಬೌಂಡರಿ ಹೊಡೆದರು. ತಲಾ 34 ರನ್‌ ಮಾಡಿದ ಫ‌ಕರ್‌ ಜಮಾನ್‌ ಮತ್ತು ಖುಷಿªಲ್‌ ಖಾನ್‌ ಪಾಕ್‌ ಸರದಿಯ ಗರಿಷ್ಠ ಸ್ಕೋರರ್.

Latest Indian news

Popular Stories

error: Content is protected !!